ಕಡಬ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ 2024-25ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಆನಂದ ಗೌಡ ಕೋಂಕ್ಯಾಡಿ ಅವರು ಜನವರಿ 31ರಂದು ಮೈಸೂರಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಸ್ವೀಕರಿಸಿದರು.




ಸಂಸಾರದ ಜವಾಬ್ದಾರಿ, ನೌಕರಿಯ ಒತ್ತಡಗಳ ನಡುವೆಯೂ ಶ್ರದ್ಧೆ ಮತ್ತು ನಂಬಿಕೆಗೆ ಧಕ್ಕೆ ಬಾರದಂತೆ ನಿರಂತರ ಪರಿಶ್ರಮದೊಂದಿಗೆ ಹಂತ ಹಂತವಾಗಿ ಸಾಧನೆ ಮಾಡಿರುವುದು ಅವರ ವಿಶೇಷತೆ. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅವರು, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.



ಬದುಕಿನ ಏರಿಳಿತಗಳ ನಡುವೆಯೂ ವಿದ್ಯಾಭ್ಯಾಸದಲ್ಲಿ ನಿರಂತರತೆ ಕಾಯ್ದುಕೊಂಡು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಆನಂದ ಗೌಡ ಕೋಂಕ್ಯಾಡಿ ಅವರ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ ವ್ಯಕ್ತವಾಗುತ್ತಿದೆ.
ಅವರ ಪ್ರಾಮಾಣಿಕ ಸೇವೆ, ಸಾಮಾಜಿಕ ಕಳಕಳಿ ಹಾಗೂ ಪರಿಶ್ರಮ ನಿರಂತರವಾಗಿರಲಿ, ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಬಂಧು-ಮಿತ್ರರು ಶುಭ ಹಾರೈಸಿದ್ದಾರೆ


