Author: PrimeTV News

ಮಹಿಳಾ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಕಾರ್ಯಾರಂಭ.ಎಡಿಷನಲ್‌ ಎಸ್ಪಿ ಅನಿಲ್ ಬೂಮಾ ರೆಡ್ಡಿಯವರಿಂದ ಚಾಲನೆ.-PRIME TV

ಪುತ್ತೂರು: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಹಾಗೂ ಸಕಾಲಿಕವಾಗಿ ಸಹಾಯ ಹಸ್ತ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಅಕ್ಕ ಪಡೆ’ ಆರಂಭಿಸಿದ್ದು ಜ.3ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಗೆ ಪೂರಕವಾಗಿ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ. ಎರಡು…

ಕೆ.ಎಸ್.ಆರ್.ಟಿ.ಸಿ ಬಸ್ ಸಮಸ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್-PRIME TV

ಸುಳ್ಯ:ಸುಳ್ಯ ತಾಲೂಕಿನಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯ ಗಂಭೀರ ಸಮಸ್ಯೆಯನ್ನು ಖಂಡಿಸಿ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು. ಸಮಯಪಾಲನೆಯಿಲ್ಲದ ಬಸ್ ಸಂಚಾರ, ಬಸ್‌ಗಳ ಕೊರತೆ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ…

ಶಾಲಾ ಮಕ್ಕಳ ಬಸ್ ಅಡ್ಡಗಟ್ಡಿ ಬಸ್ ಚಾಲಕನಿಗೆ ತರಾಟೆ: ಅವಾಜ್ ಹಾಕಿದ ಗುಂಪು-PRIME TV

ಬಂಟ್ವಾಳ : ಶಾಲಾ ಮಕ್ಕಳ ಬಸ್ ಅಡ್ಡಗಟ್ಡಿ ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸಮೀಪ ನಡೆದಿದೆ. ಶಾಲಾ‌ ಬಸ್‌ ಸ್ಕೂಟರ್‌ ಒಂದಕ್ಕೆ‌ ಡಿಕ್ಕಿ ಹೊಡೆಯಲು ಸಂಭವವಿತ್ತು‌ ಎಂದು ಆರೋಪಿಸಿ ಗುಂಪೊಂದು ಶಾಲಾ‌ ಬಸ್ ತಡೆದಿದೆ.ಕಲ್ಲಡ್ಕ ಪ್ರಭಾಕರ್…

ತಿರುಪತಿಯಲ್ಲಿ ಭದ್ರತಾ ವೈಫಲ್ಯ: ಗೋವಿಂದ ಸ್ವಾಮಿ ದೇವಸ್ಥಾನದ ಗೋಪುರ ಏರಿದ ಕುಡುಕ-PRIME TV

ತಿರುಪತಿ: ತಿರುಪತಿ ನಗರದಲ್ಲಿರುವ ಟಿಟಿಡಿಯ ‘ಗೋವಿಂದರಾಯ ಸ್ವಾಮಿ ದೇವಸ್ಥಾನ’ದ ಮುಖ್ಯದ್ವಾರದ ಗೋಪುರ ಏರಿ ಕುಡುಕ ಯುವಕನೊಬ್ಬ ಆತಂಕ ಸೃಷ್ಟಿಸಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಸ್ಥಾನದ ಪೂರ್ವದಿಕ್ಕಿನ ಮುಖ್ಯದ್ವಾರದ ಗೋಪುರ ಏರಿದ ಯುವಕ ಸುಮಾರು ಮೂರು ತಾಸು…

ಬೆಂಗಳೂರಿನಲ್ಲಿ ಬಡವರ ಮನೆ ದ್ವಂಸ: ಪುತ್ತೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ-PRIME TV

ಪುತ್ತೂರು: ಬೆಂಗಳೂರಿನಲ್ಲಿ ಬಡವರ ಮನೆಗಳನ್ನು ದ್ವಂಸಗೊಳಿಸಿ ಬುಲ್ಡೋಝರ್ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ನಗರದ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್‌ನಿಂದ…

ಉಡುಪಿ: ರಿವರ್ಸ್ ತೆಗೆಯುವ ವೇಳೆ ಒಮ್ಮೇಲೆ ಹಿಮ್ಮುಖವಾಗಿ ಚಲಿಸಿದ ಕಾರು :ಇಬ್ಬರಿಗೆ ಗಾಯ-PRIME TV

ಉಡುಪಿ: ರಿವರ್ಸ್ ತೆಗೆಯುವ ವೇಳೆ ಚಾಲಕ ನಿಯಂತ್ರಣದ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಉಡುಪಿ ಜಾಮೀಯಾ ಮಸೀದಿ ಸಮೀಪದ ಐರೋಡಿ ಬಿಲ್ಡಿಂಗ್ ಬಳಿ ಸಂಭವಿಸಿದೆ. ನಗರದ ಐರೋಡಿ ಬಿಲ್ಡಿಂಗ್ ನಲ್ಲಿ…

ಉಪ್ಪಿನಂಗಡಿ: ಬ್ಯಾಂಕ್ ಆಫ್ ಬರೋಡಾದಲ್ಲಿ ₹71.41 ಲಕ್ಷ ವಂಚನೆ – ಜಂಟಿ ವ್ಯವಸ್ಥಾಪಕರ ವಿರುದ್ಧ ಪ್ರಕರಣ-PRIME TV

ಉಪ್ಪಿನಂಗಡಿ: ಬ್ಯಾಂಕ್ ಆಫ್ ಬರೋಡಾ, ಉಪ್ಪಿನಂಗಡಿ ಶಾಖೆಯಲ್ಲಿ ನಡೆದ ಭಾರೀ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಶಾಖೆಯ ಜಂಟಿ ವ್ಯವಸ್ಥಾಪಕನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸೇವ್ ಲಾಕರ್ ಪರಿಶೀಲನೆಯ ವೇಳೆ ರೂ.55,000…

ಕೊಕ್ಕಡ: ರಿಕ್ಷಾ ಚಾಲಕ ಅಜಯ್ ಕುಮಾರ್ ಆತ್ಮಹತ್ಯೆ-PRIME TV

ನೆಲ್ಯಾಡಿ: ನೆಲ್ಯಾಡಿ ಸಮೀಪದ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ, ರಿಕ್ಷಾ ಚಾಲಕ ಅಜಯ್ ಕುಮಾರ್ (39) ಅವರು ಜನವರಿ 2ರಂದು ಮಧ್ಯಾಹ್ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಜಯ್ ಕುಮಾರ್ ಅವರು ಕೊಕ್ಕಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ…

ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ – ಬ್ರಹ್ಮಾವರ ಪೊಲೀಸರ ದಾಳಿ, 17 ಬೋಟುಗಳು ವಶ-PRIME TV

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಹಾವಂಜಿ ಗ್ರಾಮದ ಮುಗ್ಗೇರಿ ಹಾಗೂ ಉಳ್ಳೂರು ಗ್ರಾಮದ ಅಮ್ಮುಂಜೆ ಪರಿಸರದ ಸ್ವರ್ಣ ನದಿಯಲ್ಲಿ ಬೋಟ್‌ಗಳನ್ನು ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರಕಿತ್ತು. ಪೊಲೀಸ್…

ಪುತ್ತೂರು: ಗಾಂಜಾ ಸಹಿತ ವ್ಯಕ್ತಿ ಬಂಧನ-PRIME TV

ಪುತ್ತೂರು: ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. 01-01-2026 ರಂದು ಬೆಳಿಗ್ಗೆ, ಪರ್ಲಡ್ಕ ಜಂಕ್ಷನ್‌ನಲ್ಲಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರ…