ಬೆಂಗಳೂರು: ಆಟವಾಡುತ್ತಾ ಮೂರನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಯಂಡಳ್ಳಿಯಲ್ಲಿ ನಡೆದಿದೆ.

ಆಟವಾಡುತ್ತಾ ಮಗು ಕೆಳಗೆ ಬಿದ್ದ ಎದೆ ಝಲ್ ಎನ್ನುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಏ.6ರಂದು ಈ ಘಟನೆ ನಡೆದಿದೆ.

ಮಗು ಕೆಳಗೆ ಬಿದ್ದ ತಕ್ಷಣ ಅದರ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ವಿಷ್ಯ ತಿಳಿದು ಕೆಳಗೆ ಓಡಿ ಬಂದ ತಾಯಿ ಮಗುವಿನ ಸ್ಥಿತಿ ಕಂಡು ರಸ್ತೆ ಮಧ್ಯೆಯೇ ಮೂರ್ಛೆ ಹೋಗಿದ್ದಾರೆ. ಕೂಡಲೇ ಕುಟುಂಬದವರು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *