ಕಡಬ ತಾಲೂಕು, ಫೆ.18: ಐತ್ತೂರು ಗ್ರಾಮದ ಸುಳ್ಯ ಕಾಡುಮನೆ ನಿವಾಸಿ ಶ್ರೀಮತಿ ಚಿನ್ನಮ್ಮ (92) ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.18ರಂದು ಸ್ವಗೃಹದಲ್ಲಿ ನಿಧನರಾದರು.





ಸರಳ ಸ್ವಭಾವ ಹಾಗೂ ಕುಟುಂಬಪರ ಮೌಲ್ಯಗಳಿಗೆ ಹೆಸರಾದ ಅವರು ಗ್ರಾಮದಲ್ಲಿ ಎಲ್ಲರ ಆತ್ಮೀಯರಾಗಿದ್ದರು. ಮೃತರು ಪುತ್ರರಾದ ತಿಮ್ಮಪ್ಪ ಗೌಡ, ಪೂವಪ್ಪ ಗೌಡ ಹಾಗೂ ಪುತ್ರಿಯರಾದ ಪಾರ್ವತಿ, ನಾಗಮ್ಮ, ಕುಸುಮಾವತಿ, ಪುಷ್ಪಾವತಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.




