ಬೆಂಗಳೂರು: ಫೆಬ್ರವರಿ 28ರಂದು ಕಡಬ ತಾಲೂಕಿನ ಜೈನ್ ಲೇಔಟ್, ಹಳೆಸ್ಟೇಷನ್ ಕಡಬದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಲಿರುವ “ಅಧೀರ ನೈಟ್ -2026” ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಆಗಮಿಸಲಿದ್ದಾರೆ.
ಟೀಮ್ ಅಧೀರ ಕಡಬದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಭವ್ಯ ಸ್ಟಾರ್ ನೈಟ್ ಕಾರ್ಯಕ್ರಮಕ್ಕೆ ಈಗಾಗಲೇ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನಾ ಕಾರ್ಯಕ್ರಮಗಳು ಹಾಗೂ ವಿಶೇಷ ಅತಿಥಿಗಳ ಉಪಸ್ಥಿತಿ ಕಾರ್ಯಕ್ರಮದ ವಿಶೇಷತೆಗಳಾಗಿವೆ.

ಸಿಟಿ ರವಿ ಅವರನ್ನು
ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ಸದಸ್ಯರಾದ ಸುಪ್ರೀತ್ ಅಮೈ, ಟೀಮ್ ಅಧೀರ ಕಡಬದ ಅಧ್ಯಕ್ಷರಾದ ದೀಪಕ ಗೌಡ ಪಂಜ, ಕಾರ್ಯದರ್ಶಿ ಕಾರ್ತಿಕ್ ಗೌಡ ನೇರಳ ಹಾಗೂ ಸದಸ್ಯ ದೀಕ್ಷಿತ್ ಗೌಡ ಕಡಬ ಅವರು ಬೆಂಗಳೂರಿಗೆ ಭೇಟಿ ನೀಡಿದ್ದರು.. ಆಹ್ವಾನವನ್ನು ಸ್ವೀಕರಿಸಿದ ಅವರು ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ.

ಕಡಬ ತಾಲೂಕಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ “ಅಧೀರ ನೈಟ್ -2026” ಕಾರ್ಯಕ್ರಮವು ಯುವಕರಲ್ಲಿ ಹೊಸ ಉತ್ಸಾಹವನ್ನು ಮೂಡಿಸುವುದರ ಜೊತೆಗೆ ಸಾಂಸ್ಕೃತಿಕ ಸಂಭ್ರಮಕ್ಕೆ ವೇದಿಕೆ ಆಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *