ಕಡಬ, ಫೆ.11 : ಸಮಾಜಮುಖಿ ಕಾರ್ಯದ ಅಂಗವಾಗಿ ಕಡಬದ ದುರ್ಗಂಬಾ ಮೊಬೈಲ್ ಮಾಲಕ ದಯಾನಂದ ಅರಿಗ ಹಾಗೂ ಹರಿ ಕಾಂಪ್ಲೆಕ್ಸ್ ಮಾಲಕ ಕಾರ್ತಿಕ್ ಪಿಜಾಕ್ಕಳ ಅವರು ಕಡಬ ಸರಕಾರಿ ಆಸ್ಪತ್ರೆಗೆ ಸುಮಾರು ₹16,000 ಮೌಲ್ಯದ ವಾಲ್ ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದರು.

ಆಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿ ರೋಗಿಗಳ ಅನುಕೂಲಕ್ಕಾಗಿ ಈ ವಾಲ್ ಫ್ಯಾನ್‌ಗಳನ್ನು ಒದಗಿಸಲಾಗಿದ್ದು, ದಾನಿಗಳು ಆಸ್ಪತ್ರೆ ಆಡಳಿತಕ್ಕೆ ಹಸ್ತಾಂತರಿಸಿದರು. ಈ ಮೂಲಕ ರೋಗಿಗಳಿಗೆ ಉತ್ತಮ ಗಾಳಿಯ ವ್ಯವಸ್ಥೆ ಕಲ್ಪಿಸಲು ನೆರವಾಗಲಿದೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದು, ದಾನಿಗಳ ಸಮಾಜಮುಖಿ ಕಾಳಜಿಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *