ಟೆಹ್ರಾನ್: ತಮ್ಮ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಮಂಗಳವಾರದ ವರೆಗೆ (ಇಂದು) ಡೆಡ್‌ಲೈನ್ ಕೂಡ ನೀಡಿದ್ದಾರೆ. ಟ್ರಂಪ್ ಗಡುವು ಸಮೀಪಿಸುತ್ತಿದ್ದಂತೆ ಟೆನ್ಞನ್ ಕೊಡೋಕೆ ಇರಾನ್ ಹೊಸ ವರಸೆ ತೆಗೆದಿದೆ. ವಿದ್ಯುತ್ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಇರಾನ್ ಕರೆ ಕೊಟ್ಟಿದೆ.
ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಮಂಗಳವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪ್ರಮುಖ ಇಂಧನ ಮೂಲ ಸೌಕರ್ಯಗಳು ಹಾಗೂ ವಿದ್ಯುತ್ ಸ್ಥಾವರಗಳ ಬಳಿ ಒಟ್ಟುಗೂಡುವಂತೆ ಇರಾನ್‌ನ ಯುವ & ಕ್ರೀಡಾ ಸಚಿವಾಲಯ ಹೇಳಿದೆ.



ದೇಶದ ಯುವ ಸಮೂಹಕ್ಕೆ ಇರಾನ್ ಹೇಳಿರೋದೇನು?
ಯುವಜನರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹಲವು ವಿಶ್ವವಿದ್ಯಾಲಯದ ಯುವಜನರು, ಯುವ ಕಲಾವಿದರು ಹಾಗೂ ಯುವ ಸಂಘಟನೆಗಳು ದೇಶದ ವಿದ್ಯುತ್ ಸ್ಥಾವರಗಳ (Power Plants) ಸುತ್ತಲೂ ಮಾನವ ಸರಪಳಿ ರಚಿಸುವಂತೆ ಪ್ರಸ್ತಾಪಿಸಿದ್ದಾರೆ. ʻಉಜ್ವಲ ಭವಿಷ್ಯಕ್ಕಾಗಿ ಇರಾನ್ ಯುವಕರ ಮಾನವ ಸರಪಳಿʼ ಘೋಷವಾಕ್ಯದಡಿ ಅಭಿಯಾನ ಆರಂಭಿಸಲಾಗುತ್ತದೆ. ದೇಶದ ಏಕತೆ ಮತ್ತು ದೃಢನಿಶ್ಚಯ ಪ್ರತಿಬಿಂಬಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.




