ಕೋವಿ ಪರವಾನಿಗೆಗಾಗಿ ತಿಂಗಳುಗಟ್ಟಲೆ ಕಾಯುತ್ತಿದ್ದ ರೈತರು ಸೇರಿದಂತೆ ಸಾರ್ವಜನಿಕರಿಗೆ ಸ್ಪಂದಿಸುವ ಜಿಲಾಧಿಕಾರಿಗಳು, ಇನ್ನು ಮುಂದೆ ವಾರಗಳಲ್ಲೇ ಹೊಸ ಅನ್‌ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.




ಸುಳ್ಯ ಕಡಬದಲ್ಲಿ ಕೋವಿ ದುರ್ಬಳಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ ಮತ್ತು ಎಸ್. ಪಿ ಅರುಣ್ ಕುಮಾರ್ ಮಹತ್ವ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ಭಾಗದ ರೈತರಿಗೆ ಬಂದೂಕು ಪರವಾನಿಗೆ ಎಂಬುದು ಕೇವಲ ಒಂದು ಹಕ್ಕಲ್ಲ ಅದು ಕೃಷಿ ಬೆಳೆಗಲ ರಕ್ಷಣೆಗೆ ಅನಿವಾರ್ಯತೆ. ಇತ್ತೀಚೆಗೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಅವರು ಕೋವಿ ಪರವಾಣಿಗೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಆನ್ಲೈನ್ ವ್ಯವಸ್ತೆ ಜಾರಿಗೆ ತರುತ್ತಿರುವುದು ಮಹತ್ವದ ನಿರ್ಧಾರವಾಗಿದೆ.


ಜಿಲ್ಲೆಯ ಎಸ್ಪಿ, ಅರಣ್ಯಾಧಿಕಾರಿ ಹಾಗೂ ತಹಶೀಲ್ದಾರರ ಲಾಗಿನ್ ಮೂಲಕ ಸಂಬಂಧಿತ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಕೇವಲ ಒಂದುವರೆ ತಿಂಗಳೊಳಗೆ (45 ದಿನಗಳಲ್ಲಿ) ಅರ್ಜಿ ವಿಲೇವಾರಿ ಮಾಡುವುದು ಗುರಿಯಾಗಲಿದೆ. ಈ ಡಿಜಿಟಲ್ ಪರದರ್ಶಕತೆಯ ಆಡಳಿತಾತ್ಮಕ ವಿಳಂಬವನ್ನು ತಗ್ಗಿಸಿ, ರೈತರಿಗೆ ಸಮಯಕ್ಕೆ ಸರಿಯಾಗಿ ಪರವಾನಿಗೆ ಸಿಗುವಂತೆ ಮಾಡಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದಾ. ಅರುಣ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿ, ಸೂಕ್ತ ಹಾಗೂ ಕಡ್ಡಾಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಯಾವುದೇ ಅನಗತ್ಯ ತೊಂದರೆ ಇಲ್ಲದೆ ಪರವಾನಿಗೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅವೈಧ ಬೇಟೆ (Illegal Hunting) ಹಾಗೂ ಅಕ್ರಮ ಶಸ್ತ್ರ ಬಳಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಎಚ್ಚರಿಸಿದರು.
ಭಾರತೀಯ ಆಯುಧ ಕಾಯ್ದೆ (Arms Act) ಪ್ರಕಾರ, ಬಂದುಕು ಪರವಾನಿಗೆ ನೀಡುವ ಕ್ರಮವನ್ನು ಕೇವಲ ಅತ್ಯಾವಶ್ಯಕ ಅವಶ್ಯಕತೆ ಆಧಾರಿತವಾಗಿ ಮಾತ್ರ ಪರಿಗಣಿಸಲಾಗುತ್ತದೆ. ಅಪರಾಧ ಹಿನ್ನೆಲೆ ಇರುವವರು ಹಾಗೂ ನಿಯಮ ಉಲ್ಲಂಘನೆ ಮಾಡಿದವರಿಗೆ ಪರವಾನಿಗೆ ನಿರಾಕರಿಸಲಾಗುತ್ತದೆ. ಭಾರತೀಯ ನ್ಯಾಯ ಸಂಹಿತೆ (BNS) ಸೇರಿದಂತೆ ಸಂಬಂಧಿತ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುತ್ತದೆ.

ತೀರ್ಮಾನವಾಗಿ, ಶಸ್ತ್ರಾಸ್ತ್ರ ಎಂಬುದು ರಕ್ಷಣೆಗೆ ಮಾತ್ರ ಬಳಸಬೇಕಾದ ಸಾಧನವಾಗಿದ್ದು, ಅದನ್ನು ಕಾನೂನುಬದ್ಧವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಮೀರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

