ಕಡಬ : 65ನೇ ವರ್ಷದ ಏಕಹ ಭಜನೆ ಮಹೋತ್ಸವದ ಅಂಗವಾಗಿ ‘ಕಡಬ ಬೆಡಿ’ ಪ್ರಯುಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾದ ಲಕ್ಕಿ ಡಿಪ್ ಸ್ಪರ್ಧೆಯ ವಿಜೇತರ ಆಯ್ಕೆ ಇತ್ತೀಚೆಗೆ ನೆರವೇರಿತು.
ಲಕ್ಕಿ ಡಿಪ್ನಲ್ಲಿ ಪ್ರಥಮ ಬಹುಮಾನವನ್ನು ಮಮತಾ (ಟಿಕೆಟ್ ಸಂಖ್ಯೆ 1775) ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಗಂಗಾಧರ (ಟಿಕೆಟ್ ಸಂಖ್ಯೆ 5779) ಹಾಗೂ ತೃತೀಯ ಬಹುಮಾನವನ್ನು ಜಯರಾಮ್ (ಟಿಕೆಟ್ ಸಂಖ್ಯೆ 3910) ತಮ್ಮದಾಗಿಸಿಕೊಂಡಿದ್ದಾರೆ.
ಇವುಗಳ ಜೊತೆಗೆ ಕಿರಣ್, ಜಾಫರ್, ಬೇಬಿ ಬಸವ ಪಾಲು, ಟೋಮ್ ಬಜಾರ್ ಹಾಗೂ ರಾಜಕೃಷ್ಣ ಆಕರ್ಷಕ ಬಹುಮಾನಗಳನ್ನು ಗೆದ್ದಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡ್ರಾದಲ್ಲಿ ವಿಜೇತರಾದವರು ತಮ್ಮ ಅಧಿಕೃತ ಟಿಕೆಟ್ ಹಾಗೂ ಗುರುತಿನ ಚೀಟಿಯೊಂದಿಗೆ ಒಂದು ತಿಂಗಳ ಒಳಗಾಗಿ ಬಹುಮಾನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ. 65ನೇ ಏಕಹ ಭಜನೆ ಮಹೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೆ ಸಮಿತಿಯು ಕೃತಜ್ಞತೆ ಸಲ್ಲಿಸಿದೆ.









