ಕಡಬ, ಏ.12: ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಸಮೀಪದ ಕುಮಾರಧಾರಾ ನದಿ ತೀರದಲ್ಲಿ ಒಟ್ಟು 8 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೋರಿಯಾರ್ ಹಾಗೂ ಮಾಯಿಪಾಜೆ ಭಾಗಗಳಲ್ಲಿ ಆನೆಗಳು ಸಂಚಾರಿಸಿ , ಕೃಷಿ ಬೆಳೆಗಳಿಗೆ ಹಾನಿಯಾಗಿತ್ತು ಪಂಜೋಡಿ ಭಾಗದ ನಿಶಿತ್ ಮಾಯಿಪಾಜೆ ಮತ್ತು ಹರೀಶ್ ಕೋರಿಯಾರ್. ಹಾಗೂಕೆರ್ಮಯಿ ತಮಿಳು ಕಾಲೋನಿ ಯಲ್ಲಿ ಅವರ ತೋಟಗಳಿಗೆ ನುಗ್ಗಿದ ಆನೆಗಳು ತೆಂಗು, ಅಡಕೆ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿತ್ತು
ಘಟನೆ ಕುರಿತು ಮಾಹಿತಿ ತಿಳಿದುಕೊಂಡ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಹಾಗೂ ಕಾಡಾನೆಗಳ ಹಿಂಡನ್ನು ಕಾಡಿನತ್ತ ಓಡಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.





ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಯೋಗೀಶ್ ಜಿ.ಸಿ., ಬೀಟ್ ಫಾರೆಸ್ಟರ್‌ಗಳಾದ ಪ್ರಕಾಶ್ ಕುಮಾರ್, ಶುಶಾಂತ್ ಹಾಗೂ ಗ್ರಾಮಸ್ಥರಾದ ಈರೇಶ್ ಗೌಡ, ಸರ್ವೋತ್ತಮ ಗೌಡ ಪಂಜೋಡಿ, ಹರೀಶ್ ಕೋರಿಯಾರ್, ಮನಮೋಹನ್ ಗೋಲ್ಯಾಡಿ, ಸುರೇಶ್ ಕೋರಿಯಾರ್, ಜಯರಾಮ್ ಕೆರ್ಮಯಿ ಉಪಸ್ಥಿತರಿದ್ದರು.
ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಕಾಡಾನೆಗಳ ಹಾವಳಿಯಿಂದ ಆತಂಕಗೊಂಡಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


