ಅದು ನಿತ್ಯ ಕಣ್ಣೀರ ಕಡಲಲ್ಲೇ ತೇಲಾಡುತ್ತಿರುವ ಕುಟುಂಬ.. ನೆಮ್ಮದಿ ಅನ್ನೋದು ಈ ಕುಟುಂಬಕ್ಕೆ ಮರೀಚಿಕೆ. ಕುಟುಂಬಕ್ಕೆ ಆಸರೆಯಾಗಿದ್ದವರೆಲ್ಲ ಮನೆಯಲ್ಲೇ ಜೀವನ ಕಳೆಯುವಂತಾಗಿದ್ದು, ಒಂದಲ್ಲ ಒಂದು ಕಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಇದು ಎಲ್ಲಿಯ ಕರುಣಾಜನಕ ಕಥೆ ಅಂತಿರಾ..ಈ ವರದಿ ನೋಡಿ ನಿಮ್ಮ ಕಣ್ಣಂಚಿನಲ್ಲೂ ಕಣ್ಣೀರು ಸುರಿಯುತ್ತೆ…

ಪ್ರತಿಯೊಬ್ಬರಿಗೂ ಒಂದು ಒಳ್ಳೆಯ ಜೀವನ ಬೇಕು..ಕುಟುಂಬದ ಜೊತೆ ಸುಖಕರವಾಗಿ ಇರಬೇಕು.. ತಂದೆ ತಾಯಿ ಹೆಂಡತಿ ಮಕ್ಕಳು ಜೊತೆ ಬೆರೆತು ನೆಮ್ಮದಿಯಾಗಿರಬೇಕು ಅನ್ನೋದು ಆಸೆ…ಆದ್ರೆ ಇಲ್ಲೊಂದು ಕುಟುಂಬಕ್ಕೆ ಇವೆಲ್ಲವೂ ಮರಿಚಿಕೆಯಾಗಿ ಉಳಿದಿದೆ. ಹೌದು ಇದು ಕಡಬದ ತಾಲೂಕಿನ ಬಿಳಿನೆಲೆ ಗ್ರಾಮದ ಜನತಾ ಕಾಲೊನಿಯ ಒಂದು ಕುಟುಂಬದ ಕಥೆ. ಯಸ್ ದಟ್ಟ ರಬ್ಬರ್ ಕಾಡಿನ ಪಕ್ಕದಲ್ಲಿ ಮೂರು ಸೆಂಟ್ಸ್ ಜಾಗದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ವಾಸಿಸುತ್ತಿರುವ ಈ ಅಣ್ಣ ತಮ್ಮಂದಿರ ಹೆಸರು ಸೋಮ ಶೇಖರ್ ಮತ್ತು ಶಿವಪ್ರಸಾದ್. ಅಣ್ಣ ಶಿವಪ್ರಸಾದ್ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದರೆ, ತಮ್ಮ 2006ರ ಆಕ್ಸಿಡೆಂಟ್ ಒಂದರಲ್ಲಿ ಕಾಲಿಗೆ ಗಂಭೀರ ಗಾಯಗೊಂಡು ಬಳಿಕ ಕೆಲಸಕ್ಕೆ ಹೋಗದಂತ ಸ್ಥಿತಿ. ಇವರಿಬ್ಬರ ಈ ಸಂಕಟದ ನಡುವೆ ಇವರ ತಾಯಿ ವಯೋವೃದ್ಧರಾಗಿದ್ದು ಇವ್ರಿಬ್ಬರನ್ನ ನೋಡಿಕೊಳ್ಳಲು ಆಗದ ಪರಿಸ್ಥಿತಿ. ಇಷ್ಟೆಲ್ಲ ಕಷ್ಟದ ಪರಿಸ್ಥಿತಿಯ ನಡುವೆಯೂ ಶಿವಪ್ರಸಾದ್ ಅವರ ಸಹೋದರ ಸೋಮಶೇಖರ್ ಅವರಿಗೆ ಅಂಗವೈಕಲ್ಯದ ನಡುವೆ ಇದೀಗ ಕ್ಯಾನ್ಸರ್ ಎಂಬ ಮಹಾಮಾರಿ ನಾಲ್ಕನೇ ಹಂತಕ್ಕೆ ತಲುಪಿರುವುದು ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ…




ಸೋಮಶೇಖರ್ ಅವರಿಗೆ ಇದೀಗ ಕ್ಯಾನ್ಸರ್ ಎಂಬ ಮಹಾಮಾರಿ ಅಂಟಿಕೊಂಡಿದ್ದು, ಇವರ ಚಿಕಿತ್ಸೆಗೆ ಈ ಕುಟುಂಬ ಪರದಾಡುತ್ತಿದೆ. ಈ ಹಿಂದೆ ಅಂಗವೈಕಲ್ಯವನ್ನ ಮೆಟ್ಟಿನಿಂತಿದ್ದ ಸೋಮಶೇಖರ್, ಇದೀಗ ಕ್ಯಾನ್ಸರ್ ಗೆ ತುತ್ತಾಗಿರುವುದು ಅವರ ಮನೆಯವರಿಗೆ ಇನ್ನಿಲ್ಲದ ಸಂಕಟಕ್ಕೆ ದೂಡಿಹಾಕಿದೆ. ಕ್ಯಾನ್ಸರ್ ಚಿಕಿತ್ಸೆಗೆ ನಿತ್ಯ ಹಣಕಾಸಿನ ಸಮಸ್ಯೆ ಉಂಟಾಗಿದ್ದು, ಸಾಲದ ಕಡಲಲ್ಲಿ ತೇಲಾಡುವಂತಾಗಿದೆ. ಅವರ ಪರಿಸ್ಥಿತಿಯನ್ನ ಕಂಡು ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಸದ್ಯ ಇವರ ಕುಟುಂಬಕ್ಕೆಂದು ಯಾವುದೇ ವರಮಾನವಿಲ್ಲ. ಆದ್ರೆ ಶಿವಪ್ರಸಾದ್ ಅವರ ಪತ್ನಿಯ ಸಣ್ಣ ಪುಟ್ಟ ಮನೆ ಕೆಲಸದ ದುಡಿಮೆಯಿಂದ ಜೀವನ ಸಾಗುತ್ತಿದೆ. ಮನೆಗೆ ಆಧಾರಸ್ತಂಭವಾಗಿದ್ದ ಶಿವಪ್ರಸಾದ್ ಅವರು ಆಕ್ಸಿಡೆಂಟ್ ಬಳಿಕ ಕೆಲಸಕ್ಕೂ ಹೋಗದ ಪರಿಸ್ಥಿತಿ ಒಂದ್ಕಡೆಯಾದ್ರೆ, ಸಹೋದರ ಸೋಮಶೇಖರ್ ಅವರ ಸ್ಥಿತಿ ಇನ್ನೂ ಕಷ್ಟಕರ. ಹಾಗಾಗಿ ದಾನಿಗಳ ಮುಂದೆ ಈ ಕುಟುಂಬ ಸಹಾಯಹಸ್ತಕ್ಕಾಗಿ ಕೈಚಾಚಿದ್ದಾರೆ…


ಸದ್ಯ ಸೋಮಶೇಖರ್ ಅವರಿಗೆ ವಿಶೇಷ ಚೇತನರ ಮಾಸಿಕ ವೇತನ 1200 ಬರುತ್ತಿದ್ದು, ಇದು ಯಾವುದೇ ಅವರ ಚಿಕಿತ್ಸೆಗೂ ಸಾಕಾಗಲ್ಲ. ಶಾಸಕರು, ಅಧಿಕಾರಿಗಳನ್ನ ಸಂಪರ್ಕಿಸುವ ಪ್ರಯತ್ನ ನಡೆದಿದೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ..ಹಾಗಾಗಿ ದಾನಿಗಳು ಮುಂದೆ ಬಂದು ಬಿಳಿನೆಲೆಯ ಈ ಮುಗ್ಧ, ಕಡು ಬಡತನದ ಕುಟುಂಬಕ್ಕೆ ನೆರವಾಗಬೇಕಿದೆ.
ದಾನಿಗಳು….ನೆರವು ನೀಡುವರೇ

Shiva Prasad
S/O CHELLAPPAN
Acount No..44938349798
IFSC..SBIN0040953
STATE BANK OF INDIA
BRanch.. KADABA.PUTTUR
DAKSHINA KANNADA
Mob: 8861024880

