ಪುತ್ತೂರು: ಪುತ್ತೂರಿನ ಪಡೀಲ್ ನಲ್ಲಿರುವ ವಿಘ್ನೇಶ್ವರ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ‘ಔಟ್ ಲುಕ್ ಬ್ಯೂಟಿ ಸಲೂನ್ ಶುಭಾರಂಭಗೊಂಡಿದೆ. ಈ ಸಲೂನ್ ನ್ನ ಶ್ರೀಮಾ ಬ್ಯೂಟಿಪಾರ್ಲರ್ ನ ಮಾಲಕಿ ಮಾಧವಿ ಮನೋಹರ ರೈ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಸ್ವಾವಲಂಬಿಯಾಗಿ ಬದುಕಬೇಕು ಎಂಬುದನ್ನ ತೋರಿಸಿಕೊಡಲು ಮಹಿಳೆಯರು ಮುಂದೆಬರಬೇಕು. ಯಾಕಂದ್ರೆ ಈಗಿನ ಫ್ಯಾಷನ್ ಯುಗದಲ್ಲಿ ಇಂತಹ ಬ್ಯೂಟಿ ಪಾರ್ಲರ್ ಗೆ ಅಧಿಕ ಬೇಡಿಕೆ ಇದೆ. ಜೀವನಕ್ಕಾಗಿ ಉದ್ಯಮವನ್ನ ಆಯ್ಕೆ ಮಾಡುವ ಮಹಿಳೆಯರು ಈಗಿನ ಜನಮಾನಸದಲ್ಲಿ ಹೆಚ್ಚಾಗಿ ಕಾಣಿಸಕೊಳ್ಳಬೇಕು ಎಂದರು ಹೇಳಿದರು.

ದೀಪ ಬೆಳಗಿಸಿ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಒಂದು ಕನಸನ್ನ ಇಟ್ಟುಕೊಂಡು ಉದ್ಯಮವನ್ನ ಆರಂಭಿಸಿರುವುದಕ್ಕೆ ಜಯ ಯಾವತ್ತಿಗೂ ಸಿಗುತ್ತೆ. ಸ್ವಂತ ಉದ್ಯಮವನ್ನ ಮಾಡಿ ಇತರರಿಗೆ ಉದ್ಯೋಗವನ್ನು ಸೃಷ್ಟಿ ಮಾಡಿ ಕೊಟ್ಟಿದ್ದೀರಿ. ಇದರಿಂದ ಇತರರಿಗೂ ಪ್ರಯೋಜನವಾಗುತ್ತೆ. ಬ್ಯೂಟಿ ಪಾರ್ಲರ್ ಅಂದ ತಕ್ಷಣ ಸೌಂದರ್ಯವನ್ನ ವೃದ್ಧಿ ಮಾಡುವಂತದ್ದು. ಸೌಂದರ್ಯ ಅನ್ನುವಂತದ್ದು ಎಲ್ಲರಿಗೂ ಬೇಕು. ಹಾಗಾಗಿ‌ ಔಟ್ ಲುಕ್ ಬ್ಯೂಟಿ ಸಲೂನ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು‌.

ಇದೇ ಸಂದರ್ಭದಲ್ಲಿ ಔಟ್ ಲುಕ್ ಬ್ಯೂಟಿ ಸಲೂನ್ ನ ಮಾಲಕಿ ಪ್ರೀತಿ ಪ್ರವೀಣ್ ಮಾತನಾಡಿ, ಬ್ಯೂಟಿ ಸಲೂನ್ ಆರಂಭಿಸಲು ತುಂಬಾ ಕಷ್ಟ ಬಂದಿದ್ದೇನೆ. ಎಲ್ಲ ಅಡಚಣೆಗಳಿಗಳನ್ನ ಮೆಟ್ಟಿನಿಂತು ಇದೀಗ ಸಲೂನ್ ನನ್ನು ಪ್ರಾರಂಭಿಸಿದ್ದೇನೆ. ಇದಕ್ಕೆಲ್ಲ ಪುತ್ತೂರಿನ ಜನತೆ ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೀತಿ ಅವರ ಪತಿ ಪ್ರವೀಣ್, ಮಕ್ಕಳಾದ ಕನಿಕಾ , ಅಗಸ್ತ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಕಟ್ಟಡ ಮಾಲೀಕ ಸುಧೀರ್ ಶೆಟ್ಟಿ, ಶಶಿಧರ್ ನಾಯ್ಕ್, ಸಂತೋಷ್ ಕುಮಾರ್ ರೈ ಕೈಕಾರ, ನಾಗೇಶ್, ನಾಗೇಂದ್ರ ಬಾಳಿಗ, ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *