ಸುಬ್ರಹ್ಮಣ್ಯ: ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ – ಪಿಕಪ್ ವಾಹನ ಜಪ್ತಿ-PRIME TV
ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ಜಪ್ತಿ ಮಾಡಿದ ಘಟನೆ ನಡೆದಿದೆ.ಪೊಲೀಸ್ ಮೂಲಗಳ ಪ್ರಕಾರ, ತಕ್ಷಣ ತೆರಳಿದ ಪೋಲೀಸರು KA-21-A-0244 ಸಂಖ್ಯೆಯ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದರು. ಈ…
ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ಐವರು ದುರ್ಮರಣ-PRIME TV
ಮುಂಬೈ: ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಇಂದು ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಕೂಡ ಸಾವನ್ನಪ್ಪಿದ್ದಾರೆ.…
ಆನ್‌ಲೈನ್ ಫ್ರಾಡ್ ಹೆಸರಿನಲ್ಲಿ ಪಾರ್ಸೆಲ್ ಬುಕ್ ಮಾಡಿ ₹1,900 ವಂಚನೆ-PRIME TV
ಸೈಬರ್ ಕ್ರೈಂ ಠಾಣೆಗೆ ದೂರು ಕಡಬ:ಆನ್‌ಲೈನ್ ಮೂಲಕ ಪಾರ್ಸೆಲ್ ಬುಕ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ₹1,900 ಹಣ ವಂಚನೆ ಮಾಡಿದ ಘಟನೆ ಕಡಬ ತಾಲೂಕಿನಲ್ಲಿಂದು ವರದಿಯಾಗಿದೆ. ‘ಕೆವಲ ₹1,900 ರೂ.ಗೆ ಸ್ಮಾರ್ಟ್‌ಫೋನ್, ಬ್ಲೂಟೂತ್ ಮತ್ತು ಪವರ್ ಬ್ಯಾಂಕ್ ನೀಡಲಾಗುವುದು’ ಎಂಬ ಆಕರ್ಷಕ…
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ. 04 ಆರೋಪಿಗಳು ಹಾಗೂ ಕಾರು ವಶಕ್ಕೆ..!-PRIME TV
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಗುಣಾಪಾಲ ಜೆ ರವರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ…
ಐನೆಕಿದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆ-PRIME TV
ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತಂಕ ಕುಕ್ಕೆ ಸುಬ್ರಹ್ಮಣ್ಯ:‘ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ’ ಎಂದು ಸರ್ಕಾರ ಅಭಿಯಾನ ನಡೆಸುತ್ತಿರುವ ಒಂದು ಕಡೆ, ಇನ್ನೊಂದೆಡೆ ಸರ್ಕಾರಿ ಶಾಲೆಗಳಿಗೆ ಕನಿಷ್ಠ ಅಗತ್ಯ ಶಿಕ್ಷಕರನ್ನೂ ನಿಯೋಜಿಸದೆ ಮಕ್ಕಳ ಭವಿಷ್ಯದೊಂದಿಗೆ ಆಟವಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.…
ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಾಮಾಜಿಕ ಜಾಲತಾಣಅಧ್ಯಕ್ಷರಾಗಿ ಸುಪ್ರಿತ್ ಕಣ್ಣಾರಾಯ ನೇಮಕ-PRIME TV
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಮುಂಡೂರು ಗ್ರಾಮದ ನಿವಾಸಿ ಹಾಗೂ ಯುವ ಕಾಂಗ್ರೆಸ್ ನಾಯಕ ಸುಪ್ರಿತ್ ಕಣ್ಣಾರಾಯ ಅವರನ್ನು ನೇಮಕ ಮಾಡಲಾಗಿದೆ. ಸೋಮವಾರ ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖರ ಸಭೆಯಲ್ಲಿ ಶಾಸಕ ಅಶೋಕ್…
ಕಡಬ: ಮದುವೆಯಾಗದ ಚಿಂತೆಯಲ್ಲಿ ಯುವಕ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವು…!-PRIME TV
ಕಡಬ: ಮದುವೆಯಾಗುತ್ತಿಲ್ಲ ಎಂಬ ಚಿಂತೆಯಿಂದ ಮನನೊಂದು ವಿಷ ಸೇವಿಸಿದ್ದ ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಮೋನಪ್ಪ (33) ಅವರು ದೋಳ್ಪಾಡಿ ಗ್ರಾಮದ ಅಜ್ಜಿನಡ್ಕದಲ್ಲಿ ತಾಯಿ, ಸಹೋದರರು ಹಾಗೂ ಕುಟುಂಬದೊಂದಿಗೆ ವಾಸವಾಗಿದ್ದರು. ಕೂಲಿ…
ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ “ರಿಪಬ್ಲಿಕ್ ಸೇಲ್” ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ-PRIME TV
ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು, ಮೂಡಬಿದ್ರೆ,ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ತನ್ನ ಶಾಖೆಗಳಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ “ರಿಪಬ್ಲಿಕ್ ಸೇಲ್” ಜನವರಿ 22ರಿಂದ 26ರವರೆಗೆ ಆಯೋಜಿಸಲಾಗಿದ್ದು ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡಿದ್ದು…
ಸುಬ್ರಹ್ಮಣ್ಯದಲ್ಲಿ ಜನವರಿ 29ರಂದು ಮೆಸ್ಕಾಂ ಜನಸಂಪರ್ಕ ಸಭೆ..!-PRIME TV
ಸುಬ್ರಹ್ಮಣ್ಯ: ಮಂಗಳೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ವ್ಯವಹಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸುಬ್ರಹ್ಮಣ್ಯದಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ. ಸಭೆಯು ಜನವರಿ 29ರಂದು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದಲ್ಲಿ ನಡೆಯಲಿದೆ.ಮೆಸ್ಕಾಂ ಗ್ರಾಹಕರು ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಕುಂದುಕೊರತೆಗಳನ್ನು ಸಭೆಯಲ್ಲಿ ನೇರವಾಗಿ…
ಸರಸ್ವತಿ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ-PRIME TV
ಕಡಬ: ಸೋಮವಾರದಂದು ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲೆ, ವಿದ್ಯಾನಗರದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣವನ್ನು ಕಲೆ ಮತ್ತು ಸಂಸ್ಕೃತಿ ಪ್ರಕೋಷ್ಠ, ದಕ್ಷಿಣ ಕನ್ನಡದ ಕಾರ್ಯಕಾರಿಣಿ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿತ್ ಸುಳ್ಯ ಅವರು…
