ಇಂದು ದಿನಾಂಕ 07-04-2026, ಮಂಗಳವಾರದಂದು ಕೇರಳ ವಿದಾನಸಭಾ ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು ಈ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೆರ್ಲ ಮುಖ್ಯರಸ್ತೆಯಲ್ಲಿ ಅಬ್ಬರದ ಪ್ರಚಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಜೇಶ್ವರ ಎನ್‌ ಡಿ ಎ ಅಭ್ಯರ್ಥಿ ಶ್ರೀ ಸುರೇಂದ್ರನ್‌ ಅವರ ಪರವಾಗಿ ಬಿಜೆಪಿ ನಾಯಕರು ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಶ್ರೀ ಕೆ. ಅಣ್ಣಾಮಲೈ ಅವರೊಂದಿಗೆ ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು, ಮಂಗಳೂರು ಉತ್ತರ ಶಾಸಕರಾದ ಡಾ. ಭರತ್‌ ಶೆಟ್ಟಿ, ಸುಳ್ಯ ಶಾಸಕರಾದ ಕು. ಬಾಗೀರಥಿ ಮುರುಳ್ಯ ಅವರುಗಳು ರೋಡ್‌ ಶೋ ಮುಖಾಂತರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಂಜೇಶ್ವರ ಎನ್‌ ಡಿ ಎ ಅಭ್ಯರ್ಥಿ ಶ್ರೀ ಕೆ. ಸುರೇಂದ್ರನ್‌ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಅಣ್ಣಾಮಲೈ ಅವರು ಕೇರಳದ ಎಲ್.ಡಿ.ಎಫ್‌ ಮತ್ತು ಯುಡಿಎಫ್‌ ಪಕ್ಷಗಳ ವಿರುದ್ಧ ವಾಗ್ದಾಲಿ ನಡೆಸಿದರು. ವಿಕಸಿತ ಕೇರಳಂ ಗಾಗಿ ಎನ್ ಡಿ ಎ ಬೆಂಬಲಿಸುವಂತೆ ಕೇರಳದ ಪ್ರಜ್ಞಾವಂತ ಮತದಾರರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *