ಬಿಳಿನೆಲೆ ಗ್ರಾಮದಲ್ಲಿ ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ‘ಸೀರೆ ಗೋಂಡೆ’ ತಯಾರಿ ತರಬೇತಿ ಶಿಬಿರ ನಡೆಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಜ್ಞರು ಸೀರೆಗಳಿಂದ ಆಕರ್ಷಕ ಗೋಂಡೆ ತಯಾರಿಸುವ ವಿಧಾನವನ್ನು ಪ್ರದರ್ಶಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಮಾತನಾಡಿ, “ಮಹಿಳೆಯರು ಕೇವಲ ಕುಟುಂಬದ ಆಧಾರವಲ್ಲ, ಸಮಾಜದ ಪ್ರಗತಿಗೂ ಪೂರಕ ಶಕ್ತಿ. ಇಂತಹ ತರಬೇತಿಗಳಿಂದ ಆದಾಯದ ಮಾರ್ಗಗಳು ವಿಸ್ತರಿಸುತ್ತವೆ,” ಎಂದು ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ ಹಲವರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ತರಬೇತಿ ಸಂಸ್ಥೆಯ ಉಪನ್ಯಾಸಕಿ ಧರಣಿ ಅವರು ಶಿಬಿರಾರ್ಥಿಗಳಿಗೆ ತರಬೇತಿಯ ಸೌಲಭ್ಯಗಳು ಮತ್ತು ದಾಖಲಾತಿ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು ತರಬೇತಿ ಶಿಕ್ಷಕಿ ಸೌಮ್ಯ ಅವರು ತರ ಭಾರತೀಯ ಅವಧಿಯಲ್ಲಿ ಕಲಿಸಲಾಗುವ ವಿವಿಧ ವಿನ್ಯಾಸದ ಗೊಂಡೆ ತಯಾರಿ ಹಾಗೂ ಸೀರೆ ಮಡಿಚುವ ವಿಧಾನಗಳ ಬಗ್ಗೆ ವಿವರಿಸಿದ್ದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್, ಜ್ಞಾನದೀಪ ಜ್ಞಾನವಿಕಾಸದ ಸಂಯೋಜಕಿ ಉಷಾ ಸತೀಶ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚೇತನ ಹಾಜರಿದ್ದರು.

Leave a Reply

Your email address will not be published. Required fields are marked *