ಪುತ್ತೂರು: ಕೆಮ್ಮಿಂಜೆ ನಿವಾಸಿಗಳಾದ ಶಿವಾನಂದ ಶೆಣಾಯಿ ಮತ್ತು ಲತಾ ಶೆಣಾಯಿ ದಂಪತಿಗಳ ಪುತ್ರಿ ಸಮೃದ್ಧಿ ಶೆಣಾಯಿ ಅವರು ರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿ ಹೆಮ್ಮೆಯನ್ನು ತಂದಿದ್ದಾರೆ.

ಗುಜರಾತಿನ ಸೂರತ್‌ನ ಔರಾ ವಿಶ್ವವಿದ್ಯಾಲಯದಲ್ಲಿ 2026ರ ಮಾರ್ಚ್ 23 ಮತ್ತು 24ರಂದು ನಡೆದ National Level 24-Hours IBM Expert Labs Hackathon 2026 ನಲ್ಲಿ ಸಮೃದ್ಧಿ ಅವರು “Girl with Exceptional Skills Winner” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ದೇಶದ ವಿವಿಧ ಕಾಲೇಜುಗಳಿಂದ ಭಾಗವಹಿಸಿದ 150ಕ್ಕೂ ಹೆಚ್ಚು ತಂಡಗಳ ನಡುವೆ, ಮಹಿಳಾ ವಿಭಾಗದಲ್ಲಿ ದೇಶದಾದ್ಯಂತ ಏಕೈಕ ವಿಜೇತೆ ಎಂಬ ಗೌರವವನ್ನು ಅವರು ಪಡೆದಿದ್ದಾರೆ. ಇದಲ್ಲದೆ, ಈ ವಿಭಾಗದಲ್ಲಿ ಏಕೈಕ ಮಹಿಳಾ ಸಾಧಕಿ ಎಂದೂ ಗುರುತಿಸಲ್ಪಟ್ಟಿದ್ದಾರೆ.

ಅವರ ಈ ಗಮನಾರ್ಹ ಸಾಧನೆಗಾಗಿ, ಸಮೃದ್ಧಿ ಅವರನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬುಡಿಯಾರ್ ರಾಧಾಕೃಷ್ಣ ರೈ ಉಪಸ್ಥಿತರಿದ್ದರು. ಅಧ್ಯಕ್ಷರಾದ ಶಶಿಧರ ಕಿನ್ನಿಮಜಲು ಹಾಗೂ ಕಾರ್ಯದರ್ಶಿ ನವೀನ್ ರೈ ಪಂಜಾಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮೃದ್ಧಿ ಅವರ ಈ ಸಾಧನೆ ಪುತ್ತೂರಿನ ಹಾಗೂ ಕರ್ನಾಟಕದ ಹೆಮ್ಮೆ ಹೆಚ್ಚಿಸಿದೆ.

Leave a Reply

Your email address will not be published. Required fields are marked *