ಕಡಬ, ಫೆ.16: ಕಡಬ ಗ್ರಾಮದ ಪಿಜಕ್ಕಳ ಮನೆ ನಿವೃತ್ತ ಶಿಕ್ಷಕರೂ ಹಿರಿಯ ಸಾಮಾಜಿಕ ಮುಂದಾಳುವಾಗಿದ್ದ ಸಾಂತಪ್ಪ ಗೌಡ ಪಿಜಕ್ಕಳ ಅವರ ನಿಧನದ ಹಿನ್ನೆಲೆಯಲ್ಲಿ ವಿವಿಧ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು ಹಾಗೂ ಕುಟುಂಬಕ್ಕೆ ಸಂತಾಪ ಸೂಚಿಸಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಉಪಾಧ್ಯಕ್ಷರಾದ ರಾಮಕೃಷ್ಣ ಗೌಡ ಯು ಪಿ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಪುತ್ತೂರು ಮಾತೃ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಮಾಜಿ ಶಾಖಾ ವ್ಯವಸ್ಥಾಪಕ ಧರ್ಮರಾಜ್ ಕೆ ಹಾಗೂ ಯಶ್ವಿತ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ ಪ್ರಾರ್ಥಿವ ಶರೀರದ ದರ್ಶನ ಮಾಡಿ ಕುಟುಂಬದವರಿಗೆ ಧೈರ್ಯ ತುಂಬಿದರು.

ಸಾಂತಪ್ಪ ಗೌಡ ಪಿಜಕ್ಕಳ ಅವರು ಶಿಕ್ಷಕರಾಗಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಸಮಾಜದಲ್ಲಿ ಗೌರವ ಗಳಿಸಿದ್ದರು.

Leave a Reply

Your email address will not be published. Required fields are marked *