ಕಡಬ: ಅಸೌಖ್ಯದಿಂದ ಬಳಲುತ್ತಿರುವ ವ್ಯಕ್ತಿಯ ಚಿಕಿತ್ಸೆಗಾಗಿ ಪುತ್ತೂರು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಧನ ಸಹಾಯ ನೀಡಲಾಗಿದೆ.

ಕೋಡಿಂಬಾಳ ಗ್ರಾಮದ ಕೊರತ್ತಿಗುರಿ ನಿವಾಸಿ ಕುಶಾಲಪ್ಪ ನಾಯ್ಕ ಹಾಗೂ ರಾಧಾ ದಂಪತಿಯ ಪುತ್ರ ಹರೀಶ್ ಕುಮಾರ್ ಅವರು ಅಸೌಖ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ದೇವಸ್ಥಾನದ ವತಿಯಿಂದ ₹25,000 ಧನ ಸಹಾಯವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ, ಕಾರ್ಯದರ್ಶಿ ಸುಂದರ ಗೌಡ ಮಂಡೆಕರ, ಭಜನಾ ಮಂಡಳಿಯ ಅಧ್ಯಕ್ಷ ಸುಂದರ ಗೌಡ ಫಿಜಕ್ಕಳ, ಕಾರ್ಯದರ್ಶಿ ಕಿರಣ್ ಕೋಡಿ, ಜಾತ್ರೇತ್ಸವ ಸಮಿತಿ ಅಧ್ಯಕ್ಷ ಆನಂದ ಗೌಡ ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನದ ವತಿಯಿಂದ ನೆರವು ಸ್ವೀಕರಿಸಿದ ಕುಟುಂಬಸ್ಥರು ಕೃತಜ್ಞತೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *