ಕೋಟೆ: ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೋದ್ಧಾರದ ಕನಸನ್ನು ಕಾರ್ಯರೂಪಕ್ಕೆ ತಂದ ಇವತ್ತು ವಿಶ್ವದ ಗಮನ ಸೆಳೆದ ಡಿವೈನ್ ಪಾರ್ಕ್ ಮೂಲಕ ಹೆಸರು ಮಾಡಿದ ಸಾಲಿಗ್ರಾಮು ಡಿವೈನ್ ಪಾರ್ಕ್ ಸಂಸ್ಥಾಪಕ ಎ. ಚಂದ್ರಶೇಖರ್ ಉಡುಪ (75) ಹೃದಯಾಘಾತದಿಂದ ಜ.7ರಂದು ಬೆಳಗಿನ ಜಾವ ನಿಧನರಾದರು.

ಡಿವೈನ್ ಪಾರ್ಕ್ ಮೂಲಕ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದ ಇವರು ವ್ಯಕ್ತಿತ್ವ ವಿಕಸನ, ವಿದ್ಯಾಭ್ಯಾಸ, ಸೇವಾ ಕಾರ್ಯಗಳ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಎಪ್ಪತ್ತರ ದಶಕದಲ್ಲಿ ವ್ಯಕ್ತಿತ್ವ ವಿಕಸನ ವಾಸಂಗ ಮಾಡುತ್ತಿರುವಾಗ ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತರಾಗಿ, ಉಳಗಾದ ಅನಂತರ ಡಿವೈನ್ ಪಾರ್ಕ್ ಎಂಬ ಸಂಸ್ಥೆಯನ್ನು ಆರಂಭಿಸಿ, ಅದ್ಭುತ ಚಿಂತನೆಗಳೊಂದಿಗೆ ರಾಷ್ಟ್ರಕ್ಕೆ ಒಳಿತಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದರು.
ಲಕ್ಷಾಂತರ ಮಂದಿ ದೇಶ–ವಿದೇಶಗಳಲ್ಲಿ ಇವರ ಭಾಷಣ, ಅನುಯಾಯಿಗಳ ಮೂಲಕ ಅವರ ಆಲೋಚನೆಗಳಿಂದ ದಿಕ್ಕು ಕಂಡಿದ್ದರು. ಡಿವೈನ್ ಪಾರ್ಕ್‌ನ ಸಹಸಂಸ್ಥೆಯಾಗಿ ಎಸ್‌ಡಬ್ಲ್ಯುಎಫ್‌ (ಯೋಗವನ) ಸ್ಥಾಪಿಸಿ ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಮುನ್ನೆಲೆಗೆ ತಂದಿದ್ದರು.

ಮೃತರು ಪತ್ನಿ ಡಾ. ವಿವೇಕ ಉಡುಪ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಉಡುಪಿಯ ಡಿವೈನ್ ಪಾರ್ಕ್‌ನ ಜ್ಞಾನ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.
ಎ. ಚಂದ್ರಶೇಖರ್ ಉಡುಪ ಅವರ ನಿಧನದಿಂದ ಆಧ್ಯಾತ್ಮಿಕ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.

Leave a Reply

Your email address will not be published. Required fields are marked *