ಕಡಬ: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕಡಬದ ಜೆಎಂಜೆ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಮನ್ನಾ ಜಬೀನ್ ಅವರು ಉದ್ಘಾಟಿಸಲಿದ್ದಾರೆ.
ಶುಗರ್ ಇರುವವರು, ಶುಗರ್ ಇರುವ ಅನುಮಾನ ಹೊಂದಿರುವವರು ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಎಲ್ಲರೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಜನವರಿ 8ರಿಂದ 31ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತಪಾಸಣಾ ಶಿಬಿರ ನಡೆಯಲಿದೆ.

ತಪಾಸಣೆಯ ಜೊತೆಗೆ ತಜ್ಞ ವೈದ್ಯರಿಂದ ಅಗತ್ಯ ಆರೋಗ್ಯ ಸಲಹೆ ನೀಡಲಾಗುತ್ತದೆ. ಶುಗರ್ ದೃಢಪಟ್ಟ ಕೆಲವರಿಗೆ ಮೆಟ್‌ಫಾರ್ಮಿನ್ 500 ಮಿ.ಗ್ರಾಂ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ಭಾಗವಹಿಸುವಂತೆ ಜೆಎಂಜೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಶಿಬಿರವು ಜೆಎಂಜೆ ಆಸ್ಪತ್ರೆ, ಕಡಬ–ಸುಬ್ರಹ್ಮಣ್ಯ ಮುಖ್ಯ ರಸ್ತೆಯಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 6361713442 ಸಂಖ್ಯೆಯನ್ನು ಸಂಪರ್ಕಿಸಬಹುದು.
ಆರೋಗ್ಯವೇ ಸಂಪತ್ತು – ಎಲ್ಲರೂ ಬನ್ನಿ, ನಿಮ್ಮ ಮಧುಮೇಹ ತಪಾಸಣೆ ಮಾಡಿಸಿಕೊಳ್ಳಿ.

Leave a Reply

Your email address will not be published. Required fields are marked *