ಚೆನ್ನೈ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಾನವೀಯತೆ ಎಂಬುದು ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ತಮಿಳುನಾಡಿನ ಬ್ಲಿಂಕಿಟ್ ಸಂಸ್ಥೆಯ ಡೆಲಿವರಿ ಬಾಯ್ ಯೊಬ್ಬರು ಸಾಬೀತುಪಡಿಸಿದ್ದಾರೆ. ಕೇವಲ ಆರ್ಡರ್ ತಲುಪಿಸುವುದಷ್ಟೇ ತನ್ನ ಕೆಲಸ ಎಂದುಕೊಳ್ಳದ ಈ ಯುವಕ, ತಡರಾತ್ರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ಮನವೊಲಿಸಿ ಆಕೆಗೆ ಮರುಜನ್ಮ ನೀಡಿದ್ದಾರೆ.

ಏನಿದು ಪ್ರಕರಣ
ತಡರಾತ್ರಿ ಬ್ಲಿಂಕಿಟ್ ಆಪ್ ಮೂಲಕ ಗ್ರಾಹಕಿಯೊಬ್ಬರು ಮೂರು ಪ್ಯಾಕೆಟ್ ‘ಇಲಿ ಪಾಷಾಣ’ ಆರ್ಡರ್ ಮಾಡಿದ್ದರು. ಸಮಯವಲ್ಲದ ಸಮಯದಲ್ಲಿ ಇಲಿ ಪಾಷಾಣ ಆರ್ಡರ್ ಬಂದಿದ್ದನ್ನು ಕಂಡು ಡೆಲಿವರಿ ಬಾಯ್‌ಗೆ ಅನುಮಾನ ಮೂಡಿದೆ. ತಕ್ಷಣವೇ ಆರ್ಡರ್ ಪಡೆದು ಮಹಿಳೆಯ ವಿಳಾಸಕ್ಕೆ ತೆರಳಿದಾಗ, ಅಲ್ಲಿನ ದೃಶ್ಯ ಆತನ ಅನುಮಾನ ನಿಜವಾಯಿತು.

ಕಣ್ಣೀರಿನಲ್ಲಿದ್ದ ಮಹಿಳೆ; ಬೆಚ್ಚಿಬಿದ್ದ ಯುವಕ!
ಡೆಲಿವರಿ ನೀಡಲು ಹೋದಾಗ ಮನೆಯ ಬಾಗಿಲು ತೆರೆದ ಮಹಿಳೆ ತೀವ್ರವಾಗಿ ಅಳುತ್ತಿದ್ದರು. ಆಕೆಯ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಡೆಲಿವರಿ ಬಾಯ್, ಸುಮ್ಮನೆ ಆರ್ಡರ್ ನೀಡಿ ಅಲ್ಲಿಂದ ಹೊರಗೆ ಹೋಗದೆ, ಆಕೆಯ ಬಳಿ ಹೋಗಿ ಮಾತನಾಡಿಸಿದ್ದಾರೆ.

ಸಮಸ್ಯೆ ಏನೇ ಇರಲಿ, ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೀವ ಅಮೂಲ್ಯವಾದುದು. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅವು ಕಳೆದು ಹೋಗುತ್ತವೆ ಎಂದು ಸಮಾಧಾನಪಡಿಸಿದ್ದಾರೆ.

Leave a Reply

Your email address will not be published. Required fields are marked *