ಬೆಂಗಳೂರು (ಜ.10): ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exam) ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆ ಸಮೀಪ ಬರ್ತಿರುವ ವೇಳೆ ಕಿಡಿಗೇಡಿಗಳು ವಿದ್ಯಾರ್ಥಿಗಳ (Student) ಭವಿಷ್ಯದ ಜೊತೆ ಚೆಲ್ಲಾಟವಾಗುವ ಕೆಲಸ ಮಾಡ್ತಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನ (Question Papers) ಕೊಡ್ತಿದ್ದೇವೆ ಎಂದು ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾ ಫ್ಲಾಟ್​ ಫಾರಂಗಳಲ್ಲಿ ಪ್ರಶ್ನೆ ಪತ್ರಿಕೆ ಹರಿಬಿಟ್ಟು ಮೋಸದ ಜಾಲ ರೂಪಿಸಿದ್ದಾರೆ. 30 ರೂಪಾಯಿಗೆ ಪ್ರಶ್ನೆ ಪತ್ರಿಕೆ ನೀಡೋದಾಗಿ ವಂಚಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

INSTAGRAM ಅಲ್ಲಿ 30 ರೂಪಾಯಿಗೆ SSLC ಪ್ರಶ್ನೆ ಪತ್ರಿಕೆ ಲೀಕ್ ಮಾಡಲಾಗ್ತಿದೆ. ಪ್ರಮೋಷನ್ ವಿಡಿಯೋ ರೀತಿ ಪ್ರಶ್ನೆ ಪತ್ರಿಕೆಗಳನ್ನ ಬಿಡುಗಡೆ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ. ಮೊನ್ನೆ ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ಈಗ SSLC ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗ್ತಿದ್ದು, ಶಿಕ್ಷಣ ಇಲಾಖೆ ಏನ್ ಮಾಡ್ತಿದೆ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ.

Leave a Reply

Your email address will not be published. Required fields are marked *