ಜಾರ್ಖಂಡ್ ಮೂಲದ ದಿಲ್ ಜಾನ್ ಅನ್ಸಾರಿ ಎಂಬ ವಲಸೆ ಕಾರ್ಮಿಕರ ಮೇಲೆ ಮಂಗಳೂರಿನಲ್ಲಿ ಗಂಭೀರ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.




ಅನ್ಸಾರಿ ಕಳೆದ ಹತ್ತು- ಹದಿನೈದು ವರ್ಷಗಳಿಂದ ಪ್ರತಿವರ್ಷ ಸುಮಾರು ನಾಲ್ಕರಿಂದ- ಆರು ತಿಂಗಳು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು.ಇತ್ತೀಚೆಗೆ ನಾಲ್ವರು ಆರೋಪಿಗಳು ದಿಲ್ ಜಾನ್ ಅನ್ಸಾರಿಯನ್ನು ತಡೆದು ಅವನು ಬಾಂಗ್ಲಾದೇಶಿ ಎನ್ನುವ ಸುಳ್ಳು ಆರೋಪ ಮಾಡಿ, ವಿವಿಧ ದಾಖಲೆಯನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ವೇಳೆ ಅವನ ವಿರುದ್ಧ ಅನಗತ್ಯ ಹಾಗೂ ಅವಾಚ್ಯ ಹೇಳಿಕೆಯನ್ನು ನೀಡಿ ಮಾನಸಿಕವಾಗಿ ಕಿರುಕುಲ ನೀಡಲಾಗಿದೆ.


ತಾನು ಭಾರತೀಯ ನಾಗರಿಕನೆಂದು ದಿಲ್ ಜಾನ್ ಸ್ಪಷ್ಟ ಪಡಿಸಿದರು ಆರೋಪಿಗಳು ಅವನ ಮಾತನ್ನು ಒಪ್ಪದೇ ಅವನ ಬಳಿಯಲ್ಲಿದ್ದ ಕೆಲಸದ ಉಪಕರಣಗಳಿಂದಲೇ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಅವನ ತಲೆಯಿಂದ ರಕ್ತಸ್ರಾವವಾಗಿದ್ದು, ಸ್ಥಿತಿ ಗಂಭೀರವಾಗಿತ್ತು.
ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ಹಿಂದೂ ಮಹಿಳೆಯೊಬ್ಬರು ಮಧ್ಯ ಪ್ರವೇಶ ಮಾಡಿ ದಿಲ್ ಜಾನ್ ಅನ್ಸಾರಿಯನ್ನು ರಕ್ಷಿಸಿ ಹಲ್ಲೆಗಾರರನ್ನು ದೂರ ಸರಿಸಿದ್ದಾರೆ.



ಭಯದಿಂದ ದಿಲ್ಜನ್ ಅನ್ಸಾರಿ ತಕ್ಷಣ ಪೊಲೀಸರಿಗೆ ದೂರು ನೀಡದೆ ಮೌನವಾಗಿ ಮನೆಗೆ ತೆರಳಿದ್ದನು
ನಂತರ ಸ್ಥಳೀಯ ನಾಯಕರು ಒಬ್ಬರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ ಪೊಲೀಸರು ನಡೆಸಿದ ತನಿಕೆಯಲ್ಲಿ ಜಾನ್ ಅನ್ಸಾರಿ ಭಾರತೀಯ ನಾಗರಿಕನೆಬುದು ದೃಡಪಟ್ಟಿದ್ದು , ಆತ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿದ್ದಾನೆ ಎಂದು ಸ್ಪಷ್ಟವಾಗಿದೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಗುರುತಿಸಲಾಗಿದ್ದು ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
