ಕಡಬ: ಕಡಬ ನಿವಾಸಿ ಎ. ಚಿದಾನಂದ ಆಚಾರ್ಯ (57) ಅವರು ಜ.11ರಂದು ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ಚಿದಾನಂದ ಆಚಾರ್ಯ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ಸಮಯದಿಂದ ಮನೆಯಲ್ಲೇ ಇದ್ದರು. ಮೂಲತಃ ಕಡಬ ಗ್ರಾಮದ ಪಿಜಕ್ಕಳ ದಿ. ವಾಸುದೇವ ಆಚಾರ್ಯ ಪುತ್ರರಾದ ಅವರು ಕಡಬದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೃತರು ಪತ್ನಿ ಯಶೋದಾ, ಪುತ್ರ ಭರತ್ ಆಚಾರ್ಯ, ಪುತ್ರಿಯರಾದ ಚೈತ್ರಾ ಹಾಗೂ ಅವರ ಕುಟುಂಬವನ್ನು ಅಗಲಿದ್ದಾರೆ.





ಮೃತರ ಮನೆಗೆ ಕಡಬ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಸ್ಥಳೀಯ ಸಾರ್ವಜನಿಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಅಂತ್ಯಕ್ರಿಯೆ ಜ.11ರಂದೇ ನೆರವೇರಿಸಲಾಗಿದೆ.
ಚಿದಾನಂದ ಆಚಾಯರ್ ಅವರ ನಿಧನಕ್ಕೆ ಸ್ಥಳೀಯವಾಗಿ ಶೋಕ ವ್ಯಕ್ತವಾಗಿದೆ.




