ಬಂಟ್ವಾಳ: ಧರ್ಮಶಿಕ್ಷಣದ ಅಭಾವದಿಂದಾಗಿ ಇಂದು ಹಿಂದೂ ಸಮಾಜದವರಿಂದಲೇ ಧರ್ಮ ಮತ್ತು ದೇವತೆಗಳ ವಿಡಂಬನೆಯಾಗುತ್ತಿರುವುದು ವಿಷಾದನೀಯ. ಹಬ್ಬಗಳು ಮತ್ತು ವಿವಾಹ ಸಂಸ್ಕಾರಗಳಲ್ಲಿ ಸಂಸ್ಕೃತಿಯ ವಿಕೃತೀಕರಣ ನಡೆಯುತ್ತಿದ್ದು, ಇದು ಧರ್ಮಹಾನಿಗೆ ಸಮಾನವಾಗಿದೆ ಎಂದರು. ದೇವಸ್ಥಾನಗಳಲ್ಲಿ ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ಸಿಗುವ ವ್ಯವಸ್ಥೆಯಾಗಬೇಕು. ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಸಮಾಜದಲ್ಲಿ ಮನೋಬಲ ಮತ್ತು ಆತ್ಮಬಲ ವೃದ್ಧಿಸಿ, ಎಲ್ಲರೂ ಸಂಘಟಿತ ಪ್ರಯತ್ನ ಮಾಡುವುದು ಅನಿವಾರ್ಯವಾಗಿದೆ ಎಂದು ಡಾ. ಶ್ರೀ. ಪ್ರಣವ ಮಲ್ಯ ಅವರು ಕರೆ ನೀಡಿದರು.

ಬಂಟ್ವಾಳ ತಾಲೂಕಿನ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ, ಬಲಿಪಗುಳಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಧರ್ಮಾಚರಣೆ ಮತ್ತು ಧರ್ಮ ಜಾಗೃತಿ’ ಗಾಗಿ ವಿಶೇಷ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ. ರಾಜಾರಾಮ್ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ , ಉಪಸ್ಥಿತ ಕಂಪನಿಯ ನೌಕರರಿಗೆ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಇತ್ತೀಚೆಗೆ ಕೋಡಪದವು ವೀರಾಂಜನೇಯ ದೇವಸ್ಥಾನದಲ್ಲಿ ನಡೆದ ಧರ್ಮ ಜಾಗೃತಿ ಸಭೆಯಿಂದ ಪ್ರೇರಣೆ ಪಡೆದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸತ್ವಗುಣಿ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ಅನಿವಾರ್ಯ: ಲಕ್ಷ್ಮೀ ಪೈ

ಹಿಂದೂ ಧರ್ಮದ ಪ್ರತಿಯೊಂದು ಆಚರಣೆಯು ಮನುಷ್ಯನಲ್ಲಿ ಸತ್ವಗುಣವನ್ನು ವೃದ್ಧಿಸಿ ಕಲ್ಯಾಣವನ್ನುಂಟು ಮಾಡುತ್ತದೆ. ಆದರೆ ಇದರ ಅರಿವು ಇಲ್ಲದಿರುವುದರಿಂದ ಹಿಂದೂ ಸಮಾಜವು ದೈವೀ ಚೈತನ್ಯದಿಂದ ವಂಚಿತವಾಗುತ್ತಿದೆ. ಹೀಗಾಗಿ ಧರ್ಮಶಿಕ್ಷಣವನ್ನು ಪಡೆದು ಸತ್ವಗುಣಿ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನಿಸುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಎಂದು ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಅವರು ತಿಳಿಸಿದರು.

Leave a Reply

Your email address will not be published. Required fields are marked *