ಪುತ್ತೂರು: ಭಾರತ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವರ್ಷಾಚರಣೆಯನ್ನು ಕೇಂದ್ರ ಸರಕಾರದ ಸೂಚನೆಯಂತೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ನ.12 ರಂದು ಜಿಲ್ಲಾ ಮಟ್ಟದ ಏಕತಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 565 ಸಂಸ್ಥಾನಗಳನ್ನು ಭಾರತದ ಜತೆ ಸೇರಿಸಿಕೊಂಡವರು ಪಟೇಲ್ ಅವರು. ವಿಶ್ವದಲ್ಲೇ ಎತ್ತರದ ಅವರ ಮೂರ್ತಿಯನ್ನು ಮೋದಿಯವರು ಕೇವಡಿಯ ಗ್ರಾಮದಲ್ಲಿ ನಿರ್ಮಿಸಿದರು. ವರ 150 ನೇ ಜನ್ಮ ದಿನದ ಪ್ರಯುಕ್ತ ಸೋಮವಾರ ಮಂಗಳೂರಿನಲ್ಲಿ ಏಕತಾ ಜಾಥಾ ನಡೆಸಲಾಗಿದೆ. ಅದನ್ನೂ ಮೀರಿದ ರ್ಯಾಲಿ ಪುತ್ತೂರಿನಲ್ಲಿ ನ.12 ರಂದು ನಡೆಯಲಿದೆ ಎಂದರು.
ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ದ.ಕ. ಜಿಲ್ಲಾಡಳಿತ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ, ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಪುತ್ತೂರು ತಾಲೂಕು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಘಟಕ ಸಹಕಾರದೊಂದಿಗೆ ಜಾಥಾ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಮಾತನಾಡಿ ನ. 12 ರಂದು ಬೆಳಗ್ಗೆ 8.30 ಕ್ಕೆ ನೆಹರುನಗರ ವಿವೇಕಾನಂದ ಮೂರ್ತಿಯ ಬಳಿಯಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಏಕತಾ ಜಾಥ ನಡೆಯಲಿದೆ. ದೇವಸ್ಥಾನದ ಸಭಾಭವನದಲ್ಲಿ ಸಭೆ, ಏಕತಾ ಪ್ರಮಾಣವಚನ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್ ಮಾರ್ತಾ, ಚಂದ್ರಶೇಖರ್ ಬಪ್ಪಳಿಗೆ ಮೊದಲಾದವರಿದ್ದರು.

Leave a Reply

Your email address will not be published. Required fields are marked *