ಬೆಂಗಳೂರು: 26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್ (ಪುರುಷ ಮತ್ತು ಮಹಿಳಾ)ನಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ಪುರುಷರ ಯೂತ್ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಆಯೋಜಿಸಿದೆ.

ಆಯ್ಕೆ ಪ್ರಕ್ರಿಯೆಯು ಜನವರಿ 18 ಮತ್ತು 19 (ಭಾನುವಾರ ಹಾಗೂ ಸೋಮವಾರ) ಬೆಳಗ್ಗೆ 9.30ಕ್ಕೆ ಸರಿಯಾಗಿ ಚಾಮುಂಡೇಶ್ವರಿ ಕಬಡ್ಡಿ ಮೈದಾನ, ರಾಮಮೂರ್ತಿ ಶಾಸಕರ ಕಚೇರಿ ಆವರಣ, ಜಯನಗರ, ಬೆಂಗಳೂರು ಇಲ್ಲಿ ನಡೆಯಲಿದೆ.
ಈ ಆಯ್ಕೆ ಪ್ರಕ್ರಿಯೆಗೆ ಕರ್ನಾಟಕ ರಾಜ್ಯದ ವಾಲಿಬಾಲ್ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆಟಗಾರರ ಹುಟ್ಟಿದ ದಿನಾಂಕ 01-01-2005 ಅಥವಾ ನಂತರ ಆಗಿರಬೇಕು.
ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಆಟಗಾರರು ತಮ್ಮ ಜನನ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಹಾಗೂ ಟಿ.ಸಿ. (Transfer Certificate) ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗಬೇಕು.

ಹರ್ಷ ಆರ್
ಅಧ್ಯಕ್ಷರು
ಕರ್ನಾಟಕ ವಾಲಿಬಾಲ್ ಎಸೋಸಿಯೇಷನ್

ಆಂತೋನಿ ಜೋಸೆಫ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್

ಸಾಲ್ಮರ ಶರೀಫ್
ಕಾರ್ಯಕಾರಿ ಸದಸ್ಯ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್
ಆಟಗಾರರು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಹರ್ಷ ಆರ್. ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಎಲ್.ಪಿ. ಆಂಟನಿ ಜೋಸೆಫ್ ಅವರಿಗೆ ವರದಿ ಮಾಡಬೇಕು ಎಂದು ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಸಾಲ್ಮರ ಶರೀಫ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಯುವ ವಾಲಿಬಾಲ್ ಆಟಗಾರರಿಗೆ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮಹತ್ವದ ಅವಕಾಶ ಇದಾಗಿದ್ದು, ಅರ್ಹ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.









