ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಎಂಬ ಯೋಜನೆಯಡಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ದಿನಾಂಕ 19/01/2026 ರಂದು ಕಡಬ ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು.
ಕ್ಯಾಂಪ್ಕೋ ಕಡಬ ಶಾಖೆಯ ಸಕ್ರಿಯ ಸದಸ್ಯರಾದ ದಿನೇಶ್ ಬಿ ಅವರ ತಂದೆಯ ಆಕಸ್ಮಿಕ ಮರಣದ ಹಿನ್ನೆಲೆಯಲ್ಲಿ ಪರಿಹಾರ ಸಹಾಯಧನವಾಗಿ ರೂ.50,000/- (ರೂಪಾಯಿ ಐವತ್ತು ಸಾವಿರ) ಮೊತ್ತದ ಚೆಕ್ ಅನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀ ಮುರಳೀಕೃಷ್ಣ ಕೆ.ಎನ್ ಹಾಗೂ ಶ್ರೀಮತಿ ಮಾಲಿನಿ ಪ್ರಸಾದ್ ಅವರು ದಿನೇಶ್ ಬಿ ಅವರಿಗೆ ಹಸ್ತಾಂತರಿಸಿದರು.





ಈ ಕಾರ್ಯಕ್ರಮದ ವೇಳೆ ಕ್ಯಾಂಪ್ಕೋ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಸೀನಿಯರ್ ಮ್ಯಾನೇಜರ್ ಶ್ರೀ ಪ್ರಕಾಶ್ ಕುಮಾರ್ ಶೆಟ್ಟಿ, ಕಡಬ ಶಾಖೆಯ ಪ್ರಬಂಧಕರು ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.




