ಸುಬ್ರಹ್ಮಣ್ಯ: ಲಯನ್ಸ್ ಕ್ಲಬ್‌ನ ನಾಯಕರಾಗಾದ ಜಯರಾಮ ದೇವಪ್ಪಜ್ಜನ ಮನೆ, ಶಿಶಿಧರ ಪಳಂಗಾಯ, ಡಾ. ಶಿವಕುಮಾರ ಹೊಸೋಳಿಕೆ, ಲಯನ್ಸ್ ಅಧ್ಯಕ್ಷ ವಿಮಲಾ ರಂಗಯ್ಯ, ನಿತ್ಯಾನಂದ ಮುಂಡೋಡಿ, ಪ್ರೊ. ಬಾಲಚಂದ್ರ ಗೌಡ, ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಕಟ್ಟೆ, ಸುಳ್ಯದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕುಮಾರದಾರ ಸೇತುವೆ ಮೇಲೆ ನೂತನ ತಡೆಬೇಲಿಯನ್ನು ಲೋಕಾರ್ಪಣೆ ಮಾಡಲಾಯಿತು.

ಲಯನ್ಸ್ ಸಂಸ್ಥೆಯ 8ನೇ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಸ್ವಾಗತಿಸಿದರು. ಜಯರಾಮ ದೇವಪ್ಪಜ್ಜನ ಮನೆ ನಿರೂಪಣೆಯೊಂದಿಗೆ ಧನ್ಯವಾದ ಸಮರ್ಪಿಸಿದರು.
ಅವರು ಮಾತನಾಡುತ್ತಾ, “ಪರಿಸರಕ್ಕೆ ಹಾಗೂ ಸಮಾಜಕ್ಕೆ ಅತ್ಯವಶ್ಯಕವಾದ ಇಂತಹ ಸೌಲಭ್ಯಗಳನ್ನು ನೀಡುವ ಕೆಲಸ ಇದಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಅಪಾಯವಾಗದಂತೆ ತಡೆಬೇಲಿ ಅಳವಡಿಸಲಾಗಿದೆ” ಎಂದು ಹೇಳಿದರು.
ಸೇತುವೆ ಮೇಲೆ ಆಗಾಗ್ಗೆ ನಡೆಯುತ್ತಿದ್ದ ಅಪಘಾತಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ. ತಡೆಬೇಲಿ ನಿರ್ಮಾಣದಿಂದ ಭಕ್ತಾದಿಗಳು, ಸ್ಥಳೀಯರು ಹಾಗೂ ವಾಹನ ಸಂಚಾರಕ್ಕೆ ಹೆಚ್ಚಿನ ಭದ್ರತೆ ಒದಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *