ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್–12 ಯಶಸ್ವಿಯಾಗಿ ಇತ್ತೀಚೆಗೆ ಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪದ ದೂರು ದಾಖಲಾಗಿದೆ. ಸುದೀಪ್ ಅವರ ಸಿನಿಮಾ ‘ವಾರಸ್ದಾರ್’ ಧಾರಾವಾಹಿ ವಿಷಯದಲ್ಲಿ ಈ ದೂರು ದಾಖಲಾಗಿದ್ದು, ಪ್ರಕರಣ ಇದೀಗ ಪೊಲೀಸ್ ತನಿಖೆಯ ಹಂತದಲ್ಲಿದೆ.

ದೂರುದಾರರ ಹೇಳಿಕೆಯಂತೆ, ‘ವಾರಸ್ದಾರ್’ ಧಾರಾವಾಹಿಯ ನಿರ್ಮಾಣ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಹಣಕಾಸು ವ್ಯವಹಾರಗಳಲ್ಲಿ ವಂಚನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧವಾಗಿ ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹಣಕಾಸು ವ್ಯವಹಾರದಲ್ಲಿ ಸುಮಾರು 60 ಲಕ್ಷ ರೂಪಾಯಿ ಸುದೀಪ್ ಭರವಸೆ ನೀಡಿದ್ದರೆ, ಚಕ್ರವರ್ತಿ ಚಂದ್ರಚೂಡ್ ಮೂಲಕ 10 ಲಕ್ಷ ರೂಪಾಯಿ ಮಾತ್ರ ವಾಪಸ್ ದೊರೆತಿದೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಮೊತ್ತವನ್ನು ನೀಡದೆ ವಂಚನೆ ಮಾಡಿದ್ದಾರೆ ಎಂಬುದು ಆರೋಪ.
ಇನ್ನೂ, ಈ ವಿಚಾರದಲ್ಲಿ ದೀಪಕ್ ಕೇಸ್ ದಾಖಲಿಸಿದ್ದು, ಸುದೀಪ್ ಪರವಾಗಿ ದೀಪಕ್ ಮಾತನಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದು, ಮುಂದಿನ ವಿಚಾರಣೆಗಾಗಿ ಕಾಯಲಾಗುತ್ತಿದೆ.

10 ವರ್ಷಗಳ ಹಿಂದಿನ ಪ್ರಕರಣ
2016ರಲ್ಲಿ ‘ವಾರಸ್ದಾರ್’ ಧಾರಾವಾಹಿ ಸಾಕಷ್ಟು ಯಶಸ್ಸು ಕಂಡಿದ್ದು, ಆ ಸಮಯದಲ್ಲಿ ದೀಪಕ್ ಮಯ್ಯೂರು ಎಂಬವರು ಈ ಧಾರಾವಾಹಿಗೆ ಸಂಬಂಧಿಸಿದ ಹಣಕಾಸು ಹೂಡಿಕೆ ಮಾಡಿದ್ದರು. ಆದರೆ ನಂತರ ಹಣ ವಾಪಸ್ ಸಿಗದೆ ತೊಂದರೆ ಉಂಟಾಗಿದ್ದು, ಇದೀಗ ಕಾನೂನು ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ.
ಹಣೆ ನೀಡೋ ಭರವಸೆ
ಸುಮಾರು 95 ಲಕ್ಷ ರೂಪಾಯಿ ಹಣ ಪಾವತಿಸುವ ಭರವಸೆಯನ್ನು ದೀಪಕ್ ಕೇಸ್ ನೀಡಿದ್ದರು. 2023ರಲ್ಲಿ ಹಣ ನೀಡುವುದಾಗಿ ಹೇಳಿದ್ದರೂ, ಹಣ ಸಿಗದೆ ಇದೀಗ ಪೊಲೀಸ್ ದೂರು ದಾಖಲಿಸಲಾಗಿದೆ. ಈ ಪ್ರಕರಣದಿಂದಾಗಿ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

Leave a Reply

Your email address will not be published. Required fields are marked *