ಪುತ್ತೂರು:
ಜನಪದ ಕ್ರೀಡೆಯಾದ ಕಂಬಳವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿರುವ ಪುತ್ತೂರು ಕೋಟಿ ಚೆನ್ನಯ್ಯ ಜೋಡು ಕಂಬಳವು ಜನವರಿ 24 ಮತ್ತು 25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ನಾಡು ಗದ್ದೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಕಂಬಳದ ವಿಶೇಷ ಮೆರವಣಿಗೆಗೆ ಚಿತ್ರರಂಗದ ಖ್ಯಾತ ನಟ–ನಟಿಯರು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದ್ದಾರೆ. ಕ್ರೀಡಾಭಿಮಾನಿಗಳ ಜೊತೆಗೆ ಸಾರ್ವಜನಿಕರ ಭಾರೀ ನಿರೀಕ್ಷೆಯಲ್ಲಿರುವ ಈ ಕಂಬಳೋತ್ಸವ ಪುತ್ತೂರಿಗೆ ವಿಶೇಷ ಉತ್ಸವದ ವಾತಾವರಣವನ್ನು ತಂದುಕೊಡಲಿದೆ.

ಈ ವೇಳೆ ಕಂಬಳ ವೀಕ್ಷಕರ ಸೌಲಭ್ಯಕ್ಕಾಗಿ ‘ದಕ್ಷಿಣ್ ರೆಸ್ಟೋರೆಂಟ್’ ವತಿಯಿಂದ ವಿಶೇಷ ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಬ್ರೇಕ್‌ಫಾಸ್ಟ್‌ , ಎಲ್ಲಾ ವಿಧದ ತಿನಿಸಿಗಳು ಲಭ್ಯವಿದ್ದು, ಬೊಂಡಾ, ಐಸ್ ಕ್ರೀಮ್, ಸಮೋಸಾ, ಮಸಾಲೆ ದೋಸೆ, ಇಡ್ಲಿ, ಪಾವ್ ಸೇರಿದಂತೆ ವಿವಿಧ ರುಚಿಕರ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗಿದೆ.

ಎಲ್ಲಾ ಕಂಬಳ ಪ್ರೇಮಿಗಳು ಹಾಗೂ ಸಾರ್ವಜನಿಕರು ಈ ಅದ್ಧೂರಿ ಕಂಬಳೋತ್ಸವವನ್ನು ವೀಕ್ಷಿಸಿ, ಆಹಾರ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *