ಸುಳ್ಯ: ಓಡಬಾಯಿ ಎಂಬಲ್ಲಿ ಪಯಸ್ಸಿನಿನದಿಯಲ್ಲಿ ವ್ಯದ್ಯರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಕೃಷ್ಣಪ್ಪ ನಾಯ್ಕ (70) ಎನ್ನಲಾಗಿದೆ. ಇವರು ದೊಡೇರಿ ನಿವಾಸಿ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕಳೆದ ವರ್ಷಗಳಲ್ಲಿ ಕೂಡ ಪಯಸ್ವಿನಿ ನದಿಯ ಕಲ್ಮಕಾರು ಮತ್ತು ಇತರ ಭಾಗಗಳಲ್ಲಿ ಸ್ನಾನಕ್ಕೆ ಹೋದ ಯಾತ್ರಿಕರು ಮತ್ತು ಯುವಕರು ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಹಲವಾರು ಘಟನೆಗಳು ನಡೆದಿವೆ. ನದಿಯ ಕೆಲವು ಭಾಗಗಳಲ್ಲಿ ನೀರಿನ ಆಳ ಮತ್ತು ಸುಳಿ ಹೆಚ್ಚಿರುವುದರಿಂದ, ಸಾರ್ವಜನಿಕರು ಮತ್ತು ಪ್ರವಾಸಿಗರು ಜಾಗರೂಕರಾಗಿರಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *