ಸೈಬರ್ ಕ್ರೈಂ ಠಾಣೆಗೆ ದೂರು

ಕಡಬ:
ಆನ್‌ಲೈನ್ ಮೂಲಕ ಪಾರ್ಸೆಲ್ ಬುಕ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ₹1,900 ಹಣ ವಂಚನೆ ಮಾಡಿದ ಘಟನೆ ಕಡಬ ತಾಲೂಕಿನಲ್ಲಿಂದು ವರದಿಯಾಗಿದೆ. ‘ಕೆವಲ ₹1,900 ರೂ.ಗೆ ಸ್ಮಾರ್ಟ್‌ಫೋನ್, ಬ್ಲೂಟೂತ್ ಮತ್ತು ಪವರ್ ಬ್ಯಾಂಕ್ ನೀಡಲಾಗುವುದು’ ಎಂಬ ಆಕರ್ಷಕ ಜಾಹೀರಾತಿಗೆ ಮೋಸ ಹೋಗಿ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದಾರೆ.

ವಂಚಕರು ಮೊದಲು ಮೊಬೈಲ್ ಮೂಲಕ ಸಂಪರ್ಕಿಸಿ ಕಡಿಮೆ ಬೆಲೆಗೆ ಪಾರ್ಸೆಲ್ ಕಳುಹಿಸುವುದಾಗಿ ನಂಬಿಕೆ ಮೂಡಿಸಿದ್ದಾರೆ. ಬಳಿಕ ಆನ್‌ಲೈನ್ ಪಾವತಿ ಮಾಡಿಸುವ ಮೂಲಕ ಹಣ ವರ್ಗಾಯಿಸಿಕೊಂಡು, ನಂತರ ಸಂಪರ್ಕ ಕಡಿತಗೊಳಿಸಿದ್ದಾರೆ. ಪಾರ್ಸೆಲ್ ಬಾರದೆ ಇರುವುದನ್ನು ಗಮನಿಸಿದ ಬಳಿಕ ವಿಚಾರಿಸಿದಾಗ ಇದು ವಂಚನೆ ಎಂಬುದು ಬೆಳಕಿಗೆ ಬಂದಿದೆ.
ಈ ಸಂಬಂಧ ಕಡಬ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಆನ್‌ಲೈನ್ ಜಾಹೀರಾತುಗಳು, ಅತೀ ಕಡಿಮೆ ಬೆಲೆಯ ಆಫರ್‌ಗಳಿಗೆ ಮರುಳಾಗದೆ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ
ಆನ್‌ಲೈನ್ ಮೂಲಕ ಅತೀ ಕಡಿಮೆ ದರದಲ್ಲಿ ವಸ್ತು ನೀಡುವುದಾಗಿ ಹೇಳುವ ಜಾಹೀರಾತುಗಳು, ಅಪರಿಚಿತ ಲಿಂಕ್‌ಗಳು ಹಾಗೂ ಕರೆಗಳಿಗೆ ಸ್ಪಂದಿಸದೆ, ಯಾವುದೇ ಹಣ ವರ್ಗಾವಣೆ ಮಾಡುವ ಮುನ್ನ ಪರಿಶೀಲನೆ ನಡೆಸುವಂತೆ ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *