ಕಡಬ: ಕಡಬದಲ್ಲಿ ಪ್ರಪ್ರಥಮ ಬಾರಿಗೆ ಟೀಮ್ ಅಧೀರ ಕಡಬ ಇದರ ವತಿಯಿಂದ ಪ್ರಥಮ ವರ್ಷದ ‘ಅಧೀರ ನೈಟ್–2026’ ಕಾರ್ಯಕ್ರಮವನ್ನು ಫೆಬ್ರವರಿ 28ರಂದು ಸಂಜೆ ಜೈನ್ ಲೇಔಟ್ ಹಳೆ ಸ್ಟೇಷನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.



ಕಾರ್ಯಕ್ರಮದಲ್ಲಿ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಹಾಗೂ ಮನರಂಜನಾತ್ಮಕ ಮ್ಯೂಸಿಕಲ್ ನೈಟ್ಸ್ ನಡೆಯಲಿದ್ದು, ವಿಶೇಷ ತಾರಾ ಮೆರಗಿನಿಂದ ಸಂಭ್ರಮಕ್ಕೆ ಮತ್ತಷ್ಟು ಕಳೆ ಬರಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಹಾಡು–ನೃತ್ಯದೊಂದಿಗೆ ಜರುಗಲಿದೆ. ಕಡಬದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಮನರಂಜನಾ ಕಾರ್ಯಕ್ರಮ ಆಯೋಜನೆಯಾಗುತ್ತಿರುವುದರಿಂದ ಕಲಾಪ್ರಿಯರಿಗೆ ವಿಶೇಷ ರಸದೌತಣ ಸಿಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.



ಇದಲ್ಲದೆ, ಕಳೆದ ಒಂದು ವರ್ಷದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಧೀರ ಟೀಮ್ ಕಡಬ ಅನಾರೋಗ್ಯ ಪೀಡಿತರು ಹಾಗೂ ಅಸಹಾಯಕರಿಗೆ ಧನಸಹಾಯ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಹಲವರಿಗೆ ನೆರವು ಒದಗಿಸಿದೆ. ಇತ್ತೀಚೆಗೆ ರಕ್ತದಾನ ಶಿಬಿರವನ್ನೂ ಯಶಸ್ವಿಯಾಗಿ ನಡೆಸಿರುವುದು ತಂಡದ ಸೇವಾ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
‘ಅಧೀರ ನೈಟ್–2026’ ಮೂಲಕ ಮನರಂಜನೆಯ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಲಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ನಿರೀಕ್ಷಿಸಲಾಗಿದೆ.



