ಪುತ್ತೂರು: ಜ.27ರಂದು ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿರುವ ಗ್ಯಾರೆಜ್ ಒಂದರ ಬಳಿ ನಡೆದ ಘಟನೆಗೆ ಸಂಬಂಧಿಸಿ, ಗ್ಯಾರೆಜ್ ಮಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ದೂರುದಾರರ ಹೇಳಿಕೆಯಂತೆ, ಅವರು ಬೆಳಗ್ಗೆ ಗ್ಯಾರೆಜ್ ತೆರೆಯುತ್ತಿದ್ದ ಸಂದರ್ಭ ಇನೋವಾ ಕಾರಿನಲ್ಲಿ ಬಂದ ರಾಮೇಶ್ ನಾಯ್ಕ್ ಎಂಬವರು ಅನಾವಶ್ಯಕವಾಗಿ ಮಾತಿನ ಚಕಮಕಿ ಆರಂಭಿಸಿದ್ದು, ಬಳಿಕ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ದೂರುದಾರರಿಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.




ಘಟನೆ ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್.ಆರ್. ಮೋಟಾರ್ ವರ್ಕ್ಸ್ ಗ್ಯಾರೆಜ್ ಸಮೀಪ ನಡೆದಿದೆ. ವಿಷಯಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.





