ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆ ಏರಿಕೆಯಾಗಿರುವುದರಿಂದ ಜಿಲ್ಲೆಯ ರೈತರಲ್ಲಿ ಹೊಸ ಉತ್ಸಾಹ ಮೂಡಿದೆ. ಕಳೆದ ಕೆಲವು ತಿಂಗಳುಗಳಿಂದ ಕುಸಿತ ಕಂಡಿದ್ದ ಅಡಿಕೆ ದರ ಇದೀಗ ಏರಿಕೆ ಕಾಣುತ್ತಿದ್ದು, ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಡಿಕೆ ಬೆಲೆ ಹೆಚ್ಚಳದಿಂದ ತೋಟಗಳತ್ತ ಕಳ್ಳರ ಪ್ರವೇಶ ಹೆಚ್ಚಳ. ಇದೀಗ ಕಳ್ಳರನ್ನು ಪತ್ತೆ ಮಾಡಲು ಹಾಗೂ ಅಡಿಕೆಗೆ ಟೈಟ್ ಸೆಕ್ಯೂರಿಟಿ ನೀಡಲು ರೈತರು ಹೊಸ ಪ್ಲಾನ್ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ತಡೆಗೆ ರೈತರ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಅಡಿಕೆ ತೋಟಕ್ಕೆ ಇದೀಗ ಸಿ ಸಿ ಕ್ಯಾಮೆರಾ ಬಂದಿದೆ. ಅಪರಿಚಿತರ ಓಡಾಟ ನಡೆಸಿದರೆ ಲೈನ್ ಆನ್ ಮೂಲಕ ಮಾಲೀಕರ ಮೊಬೈಲಿಗೆ ಸಂದೇಶ ಕಳುಹಿಸುವ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.ಕನಿಷ್ಠ 30 ದಿನ ವಿಡಿಯೋ ಸ್ಟೋರೇಜ್ ಮಾಡಿಕೊಳ್ಳುವ ವ್ಯವಸ್ಥೆ ಇದೆ .ತೋಟಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.





ಅಡಿಕೆ ತೋಟಗಳಲ್ಲಿ ಅಪರಿಚಿತರ ಓಡಾಟ ಹಾಗೂ ಕಳ್ಳತನದ ಆತಂಕವೂ ಕಂಡುಬಂದ ಹಿನ್ನೆಲೆಯಲ್ಲಿ, ರೈತರು ತಮ್ಮ ತೋಟಗಳ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದ್ದಾರೆ. ತೋಟದ ಸುತ್ತಮುತ್ತಲ ಪ್ರದೇಶಗಳಲ್ಲಿ ನಿಗಾ ವಹಿಸುವುದರ ಜೊತೆಗೆ, ಅಗತ್ಯವಿದ್ದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಸುರಕ್ಷತಾ ಕ್ರಮಗಳನ್ನು ಬಲಪಡಿಸಲಾಗುತ್ತಿದೆ.
ಅಡಿಕೆಗೆ ಕೊಳೆ ರೋಗದ ನಡುಗೆಯ ನಡುವೆಯೂ ಬೆಲೆ ಏರಿಕೆಯು ರೈತರಲ್ಲಿ ಹೊಸ ಆಶಾವಾದ ಮೂಡಿಸಿದೆ. ಅಗತ್ಯವಾದ ಕೃಷಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ. ಬೆಲೆ ಸ್ಥಿರವಾಗಿದ್ದರೆ ಮುಂದಿನ ದಿನಗಳಲ್ಲಿ ಅಡಿಕೆ ಕೃಷಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎನ್ನಲಾಗಿದೆ.




