ನವದೆಹಲಿ: ಕೇಂದ್ರ ಬಜೆಟ್ ದಿನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ಇಂದಿನಿಂದ ಹೊಸ ದರ ಜಾರಿಗೆ ಬಂದಿದೆ. ತೈಲ ಕಂಪನಿಗಳು 19 ಕೆ.ಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ₹49 ಹೆಚ್ಚಿಸಿವೆ.



ಈ ಏರಿಕೆಯೊಂದಿಗೆ ಕಳೆದ ತಿಂಗಳಲ್ಲಿ ₹111 ಕಡಿತಗೊಂಡಿದ್ದ ವಾಣಿಜ್ಯ ಸಿಲಿಂಡರ್ ದರ ಮತ್ತೆ ಹೆಚ್ಚಳ ಕಂಡಿದೆ. ಇಂದಿನ ದರದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ₹1,740.50 ಆಗಿದ್ದು, ಬೆಂಗಳೂರು ಸೇರಿದಂತೆ ಕೆಲ ನಗರಗಳಲ್ಲಿ ಇದು ₹1,764.50ಕ್ಕೆ ತಲುಪಿದೆ.
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.






