ಕಡಬ, ಫೆ. 02:
ಕಡಬದ ಕದಂಬ ಆಟೋ ಚಾಲಕ ಮಾಲಕರ ಸಂಘದ ನೇತೃತ್ವದಲ್ಲಿ ಊರದಾನಿಗಳ ಸಹಕಾರ ಹಾಗೂ ಕಡಬ ಪಟ್ಟಣ ಪಂಚಾಯಿತಿಯ ನೆರವಿನಿಂದ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು.

ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಅವರು, ಆಟೋ ಚಾಲಕರು ಸಮಾಜದಲ್ಲಿ ಆಪತ್ಬಾಂಧವರಾಗಿ ಸೇವೆ ಸಲ್ಲಿಸುತ್ತಿರುವವರು. ತಮ್ಮ ಜೀವನೋಪಾಯಕ್ಕಾಗಿ ದುಡಿಯುವ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಭಿಲಾಶ್ ಪಿ.ಕೆ., ಕೆ.ಎಂ. ಹನೀಫ್, ನೀಲಾವತಿ ಶಿವರಂ, ಜಂಬೂರಾಜ್ ಮಹಾಜನ್, ಸೈಯದ್ ಮೀರಾ ಸಾಹೇಬ, ಕುಂಡಳ್ಳಿ ಅಬ್ಬಾಸ್, ದಯಾನಂದ ಗೌಡ ಅರಿಗ, ಸತೀಶ ನಾಯಕ ಮೇಲಿನ ಮನೆ, ಬಶೀರ್ ಕಳಾರ, ಕಿಶನ್ ಕುಮಾರ್ ರೈ ಪೆರಿಯಡ್ಕ, ತಿರುಮಲೇಶ್ವರಿ ಹೆಗ್ಡೆ, ಕರಿಮ್ ಹೊಸಮಠ, ಉಮೇಶ್ ಪೆಳತೋಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕದಂಬ ಆಟೋ ಚಾಲಕ ಮಾಲಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಚಿನ್ನ ಅರ್ಪಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ಪ್ರಸಾದ್ ಗೌಡ ಹಳೆ ಸ್ಟೇಷನ್ ವಂದಿಸಿದರು.

Leave a Reply

Your email address will not be published. Required fields are marked *