ಪುತ್ತೂರು: ಎರಡು ತಿಂಗಳ ಹಿಂದೆ ಬದಿಯಡ್ಕದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬನ್ನೂರು ಕರ್ಮಲಾ ನಿವಾಸಿ, ಪಂಚಾಕ್ಷರಿ ಲೈಟಿಂಗ್ಸ್‌ನ ಮಾಲಕ ಗಣೇಶ್ ಗೌಡ ಅವರು ಫೆಬ್ರವರಿ 3ರಂದು ಬೆಳಿಗ್ಗೆ ನಿಧನರಾದರು.
ಡಿಸೆಂಬರ್ 6ರಂದು ಲೈಟಿಂಗ್ಸ್ ಕೆಲಸದ ನಿಮಿತ್ತ ಬದಿಯಡ್ಕಕ್ಕೆ ತೆರಳಿದ್ದ ವೇಳೆ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದರು. ಅಪಘಾತದ ತಕ್ಷಣ ಸ್ಥಳೀಯರ ಸಹಾಯದಿಂದ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಆದರೆ ಕಳೆದ ಎರಡು ತಿಂಗಳುಗಳಿಂದ ಚಿಕಿತ್ಸೆ ಪಡೆದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಗೆ ಇಂದು ಬೆಳಿಗ್ಗೆ ವಿಧಿವಶರಾದರು.
ಮೃತರು ಪತ್ನಿ ಹಾಗೂ ಮಕ್ಕಳಾದ ಧನಂಜಯ ಮತ್ತು ಪ್ರದೀಪ್ ಅವರನ್ನು ಅಗಲಿದ್ದಾರೆ. ಗಣೇಶ್ ಗೌಡ ಅವರ ನಿಧನಕ್ಕೆ ಪುತ್ತೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *