ಪುತ್ತೂರು: ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ (ರಿ.), ಪುತ್ತೂರು ವಲಯದ ಆಶ್ರಯದಲ್ಲಿ ಹಾಗೂ ಬಲ್ಲಾಳ ಯುವ ಸಂಗಮದ ಸಹಕಾರದೊಂದಿಗೆ ಬಲ್ಲಾಳ ಪ್ರೀಮಿಯರ್ ಲೀಗ್ ಸೀಸನ್–4 (BPL–2026) ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 15, 2026ರಂದು ತಾಲೂಕು ಕ್ರೀಡಾಂಗಣ, ಕೊಂಬೆಟ್ಟು – ಪುತ್ತೂರು ಇಲ್ಲಿ ನಡೆಯಲಿದೆ.





ಪಂದ್ಯಾಟವು ಬೆಳಿಗ್ಗೆ ಪೂರ್ವಾಹ್ನ 8 ಗಂಟೆಯಿಂದ ಆರಂಭಗೊಳ್ಳಲಿದೆ. ಈ ಬಾರಿ ವಿಜೇತ ತಂಡಕ್ಕೆ ರೂ.20,026 ನಗದು ಬಹುಮಾನ ಹಾಗೂ ಬಿಪಿಎಲ್ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.15,026 ನಗದು ಬಹುಮಾನ ಹಾಗೂ ಬಿಪಿಎಲ್ ಟ್ರೋಫಿ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಮಹಿಳಾ ಬಂಧುಗಳಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ ಕೂಡ ಆಯೋಜಿಸಲಾಗಿದ್ದು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಕ್ರೀಡಾಕೂಟಕ್ಕೆ ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ, ಪುತ್ತೂರು ವಲಯದ ಬಿಪಿಎಲ್ ತಂಡವು ಎಲ್ಲರಿಗೂ ಆದರದ ಸ್ವಾಗತ ಕೋರಿದೆ.




