ಪುತ್ತೂರು; ಕನಸಿನ ಮನೆ ನಿರ್ಮಾಣ ಹಾಗೂ ಅಲಂಕಾರ ಮಾಡುವ ಯೋಚನೆಗಳನ್ನು ಹೊತ್ತವರಿಗೆ ಫೆ.21ರಿಂದ 23ತನಕ ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ತಂತ್ರಜ್ಞಾನದ ಮಾಗದರ್ಶನ ನೀಡುವ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ ಎಂ.ಎಸ್ ಮತಾವು ಹಾಗೂ ಬೆಂಗಳೂರಿನ ಯು.ಎಸ್. ಕಮ್ಯೂನಿಕೇಶನ್ ಸಂಸ್ಥೆಯ ಉಮಾಪತಿ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮೂರು ದಿನಗಳ ತಾಂತ್ರಿಕ, ಅಭಿಯಾತ್ರಿಕ ವಸ್ತುಪ್ರದರ್ಶನದಲ್ಲಿ ಸುಂದರ ಮನೆ ನಿರ್ಮಾಣ ಹಾಗೂ ಈಗಾಗಲೇ ಕಟ್ಟಿರುವ ಮನೆಯನ್ನು ಸುಂದರವಾಗಿಸುವ ಅಲಂಕಾರ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಕಟ್ಟಡ ಸಾಮಾಗ್ರಿಗಳ ಬಗ್ಗೆ ಗುಣಮಟ್ಟ ಆಧಾರಿತ ಮಾಹಿತಿ ನೀಡುವ ಕೆಲಸ ವಿವಿಧ ಕಂಪೆನಿಗಳು ನೀಡಲಿವೆ. ಸುಮಾರು ೭೦ ವಿವಿಧ ಬಗೆಯ ಕಂಪೆನಿಗಳು ಈ ವಸ್ತು ಪ್ರದರ್ಶನದಲ್ಲಿ ತಮ್ಮ ಉತ್ಪನ್ನಗಳ ಬಗ್ಗೆ ಪ್ರದರ್ಶನ ಮತ್ತು ಮಾಹಿತಿ ನೀಡಲಿವೆ. ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್ ಎಂ ಸೆಂಡ್, ಸ್ಟೀಲ್, ಪ್ಲಂಬಿ0ಗ್, ಟೈಲ್ಸ್, ಪ್ಲೆವುಡ್, ಇಂಟೀರಿಯರ್ ಪರಿಕರಗಳು, ಎಕ್ಷೀರಿಯರ್ ಉತ್ಪನ್ನಗಳು, ಸೋಲಾರ್ ಮತ್ತು ಎಲೆಕ್ಟಿçಕಲ್ ಉತ್ಪನ್ನಗಳು, ಅತ್ಯಾಧುನಿಕ ಗುಣಮಟ್ಟದ ಸೆಕ್ಯೂರಿಟಿ ಉತ್ಪನ್ನಗಳು, ಯುಪಿವಿಸಿ ಡೋರ್ಸ್, ವಿಂಡೋಸ್ ಪೈಂಟ್ ಮತ್ತು ಅಡೆಸ್ಟೀವ್, ವಾಟರ್ ಪ್ರೂಪಿಂಗ್ ಸೇರಿದಂತೆ ವಿವಿಧ ಹಲವಾರು ಉತ್ಪನ್ನಗಳ ನವನವೀನ ವಿನ್ಯಾಸಗಳನ್ನು ಈ ವಸ್ತುಪ್ರದರ್ಶನದಲ್ಲಿ ಕಾಣಲು ಅವಕಾಶವಿದೆ. ಪ್ರಾಪರ್ಟಿ ಸಂಬ0ಧಿತ ಮಳಿಗೆಗಳು ನಿವೇಶನ ಖರೀದಿಗೆ ಅವಕಾಶ ಹಾಗೂ ವಿಶೇಷ ಆಕರ್ಷಣೆಯಾಗಿ ಅಟೋ ಎಕ್ಸ್ಫೋ ಎಲ್ಲಾ ತರದ ವಾಹನಗಳ ಮಾರಾಟ ಮೇಳವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೂರುದಿನವೂ ಬೆಳಿಗ್ಗೆ ೧೦.೩೦ರಿಂದ ಸಂಜೆ ೮.೩೦ ತನಕ ಈ ವಸ್ತುಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಲಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಲೋಕೋಪಯೋಗಿ ಇಲಾಖಾಧಿಕಾರಿ ರಾಜೇಶ್ ರೈ, ಡಾ.ಯು.ಪಿ.ಶಿವಾನಂದ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಪುತ್ತೂರು ಸೆಂಟರ್ ಹಾಗೂ ಬೆಂಗಳೂರಿನ ಯು.ಎಸ್.ಕಮ್ಯೂನಿಕೇಶನ್ ಸಹಭಾಗಿತ್ವದಲ್ಲಿ ಈ ವಸ್ತು ಪ್ರದರ್ಶನ ಆಯೋಜನೆಗೊಳ್ಳಲಿದೆ.

ಪತ್ರಿಕಾಗೋಷ್ಟಿಯಲ್ಲಿ ಸಿವಿಲ್ ಇಂಜಿನಿಯರ್ ಸಂಸ್ಥೆಯ ಕಾರ್ಯದರ್ಶಿ ವೆಂಕಟ್‌ರಾಜ್, ಸದಸ್ಯರಾದ ನವಿತಾ ಮತ್ತು ಚಂದ್ರಶೇಖರ ಆಳ್ವ, ಸುದ್ದಿ ಮಾಹಿತಿ ಟ್ರಸ್ಟ್ನ ನಮಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *