ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಮತ್ತು ಹಿರಿಯ ವಿದ್ಯಾಧಿಕಾರಿ ಸಂಸ್ಥೆ ನೆಹರು ಮೆಮೊರಿಯಲ್ ಕಾಲೇಜು ಸುಳ್ಯ ಇವರ ಸಹಯೋಗದಲ್ಲಿ ಗಡಿನಾಡು ಸುಳ್ಯ ಪರಿಸರದ ಭಾಪಾ ಪರಂಪರೆ ಎಂಬ ವಿಷಯದಲ್ಲಿ ಒಂದು ದಿನದ ವಿಚಾರ ಗೊಷ್ಟಿ ಸುಳ್ಯ ಎನ್.ಎಂ. ಸಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.




ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ ಅವರ ಉಪಸ್ಥಿತಿಯಲ್ಲಿ ಹಿರಿಯ ವಿದ್ಯಾಧಿಕಾರಿ ಸಂಸ್ಥೆಯ ಸಭೆ ನಡೆಯಿತು. ಆಮಂತ್ರಣವನ್ನು ವಿಶ್ರಾಂತ ಪ್ರಾಂಶುಪಾಲ ಡಾ. ಪೂವಪ್ಪ ಕಣಿಯೂರು ಹಾಗೂ ಸಂಸ್ಥೆಯ ಹಿರಿಯ ವಿದ್ಯಾಧಿಕಾರಿ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಎನ್.ಎಂ. ಸಿ ಕಾಲೇಜಿನ ಪ್ರಾಧ್ಯಾಪಕ ಶ್ರೀಮತಿ ಮಧುರಾ ಎಂ.ಆರ್., ಕೋಶಾಧಿಕಾರಿ ಲೋಕೇಶ್ ಪೆರ್ಲಂಪಾಡಿ, ನಿರ್ದೇಶಕರಾದ ಕುಲದೀಪ್ ಪೆಳ್ಳಕ್ಕೆ, ರಜತ್ ಅಡ್ಯಾರ್ ಹಾಗೂ ಕಾಲೇಜಿನ ಸುಳ್ಯ ಶಿವಪ್ರಸಾದ್ ಕೆಂಪೆಳ ಉಪಸ್ಥಿತರಿದ್ದರು.





