ಪುತ್ತೂರು: ಪಾರಾದೀಪ್ ಪಾಸ್ಟೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಹಾಗೂ ತ್ರಿಶೂಲ್ ಫ್ರೆಂಡ್ಸ್ (ರಿ.) ಪುತ್ತೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರ ಫೆಬ್ರವರಿ 15ರ ಭಾನುವಾರ ಲಯನ್ಸ್ ಸೇವಾ ಮಂದಿರ ಕೋರ್ಟ್ ರಸ್ತೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9ರಿಂದ ಮದ್ಯಾಹ್ನ 12.30 ರ ತನಕ ಶಿಬಿರ ನಡೆಯಲಿದೆ. ಆಸಕ್ತರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.






ಶಿಬಿರದಲ್ಲಿ ದೊರೆಯುವ ಸೌಲಭ್ಯಗಳು
- ನೇತ್ರ ತಜ್ಞರಿಂದ ಕಣ್ಣಿನ ಪರೀಕ್ಷೆ ಮತ್ತು ಸಲಹೆಗಳು ಶಿಬಿರದಲ್ಲಿ ತಪಾಸಣೆಗೆ ಒಳಗಾಗಿ ಆವಶ್ಯಕತೆ ಕಂಡು ಬಂದವರಿಗೆ ಉಚಿತ ಶಸ್ತ್ರಚಿಕಿತ್ಸೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು
- ಸಕ್ಕರೆ ಕಾಯಿಲೆಗೆ ರಕ್ತ ಪರೀಕ್ಷೆ
- ರಕ್ತದ ಒತ್ತಡದ (ಬಿ.ಪಿ.) ಪರೀಕ್ಷೆ
- ಉಚಿತ ಕನ್ನಡಕ ನೀಡಲಾಗುವುದು.
- ಚರ್ಮರೋಗ ತಪಾಸಣೆ ಮತ್ತು ಚಿಕಿತ್ಸೆ




