ಬೆಳ್ತಂಗಡಿ: ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಚೂರಿಯಿಂದ ಇರಿತ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಹೊಸ ತಿರುವು ಪಡೆದಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಬಾಲಕಿ ನೀಡಿದ ಹೇಳಿಕೆ ಸುಳ್ಳು ಎಂದು ಬಹಿರಂಗವಾಗಿದೆ.



ಬಾಲಕಿ ಅಪಹರಣಕ್ಕೊಳಗಾಗಿ ತನ್ನ ಹಿತದೃಷ್ಟಿಯಿಂದ ಪ್ರಕ್ರಿಯೆಯನ್ನು ಸುಳ್ಳುವಾಗಿ ವಿವರಿಸಿದ್ದಾಗಿ ತಿಳಿದುಬಂದಿದೆ. ಈ ಕುರಿತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಅವರ ಮೂಲಕ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಇದಲ್ಲದೆ, ಅಪಹರಣ ಮತ್ತು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಅಪಹರಣ ಹಾಗೂ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷೀಲನೆ ವೇಳೆ ಬಾಲಕಿಯ ದೇಹದಲ್ಲಿ ಉಲ್ಭವಿಸಿದ ಗಾಯವು ಸ್ವಯಂ ಉಂಟುಮಾಡಿಕೊಂಡ ಗಾಯ (Self Inflicted Wound) ಎಂದು ದೃಢಪಟ್ಟಿದೆ.
ಬಾಲಕಿ ತನ್ನ ಹೆಸರನ್ನು ಮತ್ತೊಬ್ಬರಿಗೆ ತಿಳಿಸದಂತೆ ಈ ರೀತಿಯ ಕೃತ್ಯ ತಾನೇ ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



