ಮಂಗಳೂರು: ಗ್ರಾಮ ಪಂಚಾಯತ್ ಗಳು ಆಡಳಿತ ಮಂಡಳಿ ಅವಧಿ ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಅವರ ಅವಧಿ ಮುಕ್ತಾಯ ದಿನದಿಂದ ಮುಂದಿನ ಆದೇಶದವರೆಗೆ ಗ್ರಾ.ಪಂ. ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಗೊಳಿಸಿ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ್ದಾರೆ.
ಮುಂದಿನ ಸದಸ್ಯರ ಅಸ್ತಿತ್ವಕ್ಕೆ ಬರುವವರೆಗೂ ಅವುಗಳ ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಹಾಗೂ ಗ್ರಾಮಪಂಚಾಯತ್ ಗಳ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ. ನೇಮಕಗೊಂಡ ಅಧಿಕಾರಿಗಳು ಅವಧಿ ಮುಕ್ತಯಗೊಂಡ ಗ್ರಾಮ ಪಂಚಾಯತ್ ಅಡಳಿತಾಧಿಕಾರಿಯ ಹುದ್ದೆಯ ಪ್ರಭಾರವನ್ನು ಜಾರಿಬರುವ ದಿನಾಂಕದಿಂದ ಪ್ರಭಾರವನ್ನು ವಹಿಸಿಕೊಂಡು ಪ್ರಬಾರವಹಿಸಿದ ಕುರಿತು ತಪ್ಪದೇ ಈ ಕಛೇರಿಗೆ ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.









