ವಿಟ್ಲ : ಇಬ್ಬರು ಐಟಿಐ ವಿದ್ಯಾರ್ಥಿಗಳ ನಡುವೆ ಸಣ್ಣ ಕಾರಣಕ್ಕೆ ಜಗಳ ಉಂಟಾಗಿ ಚೂರಿ ಹಿರಿತಗೊಂಡ ಘಟನೆ ವಿಟ್ಲದ ಐಟಿಐ ತರಗತಿ ಒಳಗೆ ಸಂಭವಿಸಿದೆ.
ಜಗಳದಲ್ಲಿ ಬನ್ನೂರು ನಿವಾಸಿ ಮಹಮ್ಮದ್ ರಿಯಾನ್ (18) ಮತ್ತು ಮಂಜೇಶ್ವರ ದೈಗೋಳಿ ನಿವಾಸಿ ಯಜೇಶ್ ಎಂಬವರು ಗಾಯಗೊಂಡಿದ್ದು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.






ಪ್ರಥಮ ವರ್ಷದ ಎಲೆಕ್ನಶಿಯನ್ ಐಟಿಐ ಕಲಿಯುತ್ತಿರುವ ಮಹಮ್ಮದ್ ರಿಯಾನ್ ಮತ್ತು ವಿಟ್ಲ ನಿವಾಸಿ ಹೇಮಂತ್ ಅವರ ನಡುವೆ ಜಗಳ ಉಂಟಾಗಿದ್ದು ಅದನ್ನು ತಡೆಯಲು ಬಂದ ಮತ್ತೊಬ್ಬ ವಿದ್ಯಾರ್ಥಿ ಯಜೇಶ್ ಗೂ ಗಾಯವಾಗಿದೆ .
ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.



