ಪುತ್ತೂರು: ಟೆರಿಟೋರಿಯಲ್ ಆರ್ಮಿ ನೇಮಕಾತಿ ನವೆಂಬರ್ 21ರಿಂದ 23ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ವಿದ್ಯಾಮಾತಾ ಅಕಾಡೆಮಿ ಉಚಿತ ಪೂರ್ವಸಿದ್ಧತಾ ತರಬೇತಿಯನ್ನು ಆಯೋಜಿಸಿದೆ. ನವೆಂಬರ್ 15ರಿಂದ 19ರ ವರೆಗೆ ನಡೆಯಲಿರುವ ಈ ತರಬೇತಿಯಲ್ಲಿ ಮೈದಾನ ತರಬೇತಿ ಹಾಗೂ ಲಿಖಿತ ಪರೀಕ್ಷಾ ಸಿದ್ಧತೆ ಒಳಗೊಂಡಿದ್ದು, ಉಚಿತ ವಸತಿ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನೇಮಕಾತಿ ಮಾನದಂಡಗಳು

ಆಯ್ಕೆ ಪ್ರಕ್ರಿಯೆ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಸ್ಟೇಡಿಯಂ, ಬೆಳಗಾವಿಯಲ್ಲಿ ನಡೆಯಲಿದೆ.

SSLC ಮೇಲ್ಪಟ್ಟ ಪುರುಷ ಅಭ್ಯರ್ಥಿಗಳು ನೇರವಾಗಿ ನೇಮಕಾತಿಯಲ್ಲಿ ಭಾಗವಹಿಸಬಹುದು.

ನೇಮಕಾತಿ ದೈಹಿಕ ಸದೃಡತೆ / ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ಮೂಲಕ ನಡೆಯಲಿದೆ.

18 ರಿಂದ 42 ವರ್ಷದೊಳಗಿನ ಅರ್ಹ ಪುರುಷರು ಭಾಗವಹಿಸಬಹುದು.

ಅಗತ್ಯ ದಾಖಲೆಗಳು: ಫೋಟೋ, ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ (Original ಹಾಗೂ Xerox ಪ್ರತಿಗಳು ಕಡ್ಡಾಯ)

ನೇಮಕಾತಿ ವೇಳಾಪಟ್ಟಿ

➤ ನ. 21, 2025 – ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ:
ಕೊಪ್ಪಳ, ಧಾರವಾಡ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಕೊಡಗು, ಕಲಬುರ್ಗಿ, ಬಳ್ಳಾರಿ, ಬೀದರ್, ಚಿಕ್ಕಮಗಳೂರು

➤ ನ. 22, 2025 – ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ:
ದಕ್ಷಿಣ ಕನ್ನಡ, ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಾಗಲಕೋಟೆ, ಹಾಸನ, ಉತ್ತರ ಕನ್ನಡ, ಚಾಮರಾಜನಗರ

➤ ನ. 23, 2025 – ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ:
ಬೆಳಗಾವಿ, ಉಡುಪಿ, ದಾವಣಗೆರೆ, ಶಿವಮೊಗ್ಗ, ರಾಯಚೂರು, ಗದಗ, ಹಾವೇರಿ, ವಿಜಯಪುರ, ವಿಜಯನಗರ, ಯಾದಗಿರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ — ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಖಾಸಗಿ ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆ
ಪುತ್ತೂರು, ಸುಳ್ಯ, ಕಾರ್ಕಳ
📞 9620468869 / 9148935808

Leave a Reply

Your email address will not be published. Required fields are marked *