ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಗುತ್ತಿಗಾರು ಹಾಗೂ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇವರ ಸಹಯೋಗದಲ್ಲಿ 5ನೇ ವರ್ಷಾಚರಣೆ ಅಂಗವಾಗಿ ಫೆಬ್ರವರಿ 8, 2026ರಂದು ಚಿಕ್ಮುಳಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು.




ಈ ಸ್ಪರ್ಧೆಯ 1ರಿಂದ 2ನೇ ತರಗತಿ ಹುಡುಗರ ವಿಭಾಗದಲ್ಲಿ ಗಾಯನ್ ಆರೆಂಬಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗಾಯನ್ ಆರೆಂಬಿ ಅವರು ಕಡಬದ ಅಜಂತ ಪ್ಯಾಶನ್ ಟೈಲರ್ ಮಾಲಕರಾದ ಎಣ್ಮೂರು ಗ್ರಾಮದ ಆರೆಂಬಿ ನಿವಾಸಿ ಶ್ರೀ ರಾಧಾಕೃಷ್ಣ ಗೌಡ ಮತ್ತು ಶ್ರೀಮತಿ ನಳಿನಿ ದಂಪತಿಯ ಪುತ್ರ. ಇವರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯದಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.



ಯೋಗ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಗಾಯನ್, ನಿಂತಿಕಲ್‌ನ ನಿರಂತರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಈ ಸಾಧನೆಯ ಮೂಲಕ ಶಾಲೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.


