ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಬಿವೃದ್ದಿ ಯೋಜನೆಯ ಹಿನ್ನಲೆಯಲ್ಲಿ ದೇವಸ್ಥಾನದ ಪಾರ್ಶ್ವದಲ್ಲಿದ್ದ ಸುಮಾರು 50 ವರ್ಷಗಳ ಇತಿಹಾಸ ಹೊಂದಿದ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಸುಮಾರು 9 ವರ್ಷಗಳಿಂದ ಈ ಶಾಲಾ ಕಟ್ಟಡ ಮುಚ್ಚಲ್ಪಟ್ಟಿತ್ತು. ಕಾಕತಾಳೀಯವಾಗಿ 2017ರ ಫೆಬ್ರವರಿ ತಿಂಗಳಲ್ಲಿ ಶಾಲೆಯನ್ನು ಮುಚ್ಚಲಾಗಿದ್ದು, ಇದೀಗ ಅದೇ ತಿಂಗಳಲ್ಲಿ ಕಟ್ಟಡವನ್ನು ತೆರವು ಮಾಡಲಾಗಿದೆ.




ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮಾಸ್ಟರ್ ಪ್ಲ್ಯಾನ್ ಮಾದರಿಯಲ್ಲಿ ಅಬಿವೃದ್ದಿ ಕಾರ್ಯಗಳಿಗೆ ವೇಗ ನೀಡಲಾಗಿದ್ದು, ಹಳೆಯ ಕಟ್ಟಡಗಳನ್ನು ಪುನರ್‌ನಿರ್ಮಾಣ ಮಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಶಾಲಾ ಕಟ್ಟಡದಲ್ಲಿ 1 ರಿಂದ 5ನೇ ತರಗತಿಯ ತನಕ ಪಾಠ ನಡೆಯುತ್ತಿತ್ತು. ಸುಮಾರು 50 ವರ್ಷಗಳಿಂದ ಆರಂಬಗೊಂಡಿದ್ದ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದರು.
ಆದರೆ 2017ರಲ್ಲಿ ಮಕ್ಕಳ ಸಂಖ್ಯೆಯ ಕುಸಿತ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. 9 ವರ್ಷಗಳಿಂದ ಶಾಲೆ ಬಳಕೆಯಾಗದೆ ಖಾಲಿ ಇದ್ದ ಕಟ್ಟಡ ಇದೀಗ ದೇವಸ್ಥಾನದ ಅಬಿವೃದ್ದಿ ಯೋಜನೆಗಾಗಿ ತೆರವುಗೊಳಿಸಲಾಗಿದೆ.



ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಕೋಡಿ ಚೆನ್ನಯ್ಯ ಜೋಡುಕರೆ ಕಂಬಳದ ಕರೆಯನ್ನು ಸ್ಥಳಾಂತರ ಮಾಡಲಾಗಿದೆ. ಕರೆಯು ಈಗಾಗಲೇ ಮಣ್ಣು ತುಂಬಿಸುವ ಕಾರ್ಯದ ಮೂಲಕ ನಡೆಯಲ್ಲಿ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕರೆಯ ನಿರ್ಮಾಣವೂ ಆಗಲೇ ಅಂತ್ಯಗೊಂಡಿದೆ ಎಂದು ತಿಳಿದುಬಂದಿದೆ.

ಧ್ವಜಸ್ತಂಭ ಮಾಗದರ್ಶನ, ತಂತಿಗಳ ಸಲೀಸು ಹಾಗೂ ಶಾಸಕರ ಸೂಚನೆಯಂತೆ ದೇವಸ್ಥಾನದ ವಿವಿಧ ಅಬಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಸ್ಪೋರ್ಟ್ಸ್ ಧ್ವಜಸ್ತಂಭ ಪಾರ್ಕಿಂಗ್ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಇದೇ ವೇಳೆ ಹೋರಾಂಗಣದಲ್ಲಿ ಕಂಬಳ ಪುನರ್‌ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ.
ದೇವಸ್ಥಾನದ ಹಿಂಭಾಗದಲ್ಲಿದ್ದ ಶಾಲಾ ಕಟ್ಟಡ ತೆರವುಗೊಳಿಸಿರುವುದು ಸಾರ್ವಜನಿಕರಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟಿಸಿದ್ದು, ಕೆಲವರು ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇತಿಹಾಸ ಪುಟ ಸೇರಿದ ಕಟ್ಟಡವನ್ನು ಸಂರಕ್ಷಿಸಬೇಕಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

