ಸುಳ್ಯ: ಗುತ್ತಿಗರು ಗ್ರಾಮದ ಅಡ್ಡನಪಾರೆ ಪ್ರದೇಶದಲ್ಲಿ ಶೌಚಾಲಯದೊಳಗೆ ಯುವಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಳೆದ ಸಂಜೆ ಬೆಳಕಿಗೆ ಬಂದಿದೆ.
ಅಡ್ಡನಪಾರೆ ನಿವಾಸಿ ಗೋಪಾಲ ನಾಯ್ಕ ಅವರ ಪುತ್ರ ಮಹಾಬಲ ಮೃತ ವ್ಯಕ್ತಿಯಾಗಿದ್ದಾರೆ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಫೆಬ್ರವರಿ 4ರಂದು ರಾತ್ರಿ ಮಹಾಬಲ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದು ತನ್ನ ಮನೆಯಲ್ಲೇ ಬೆಂಕಿ ಹಚ್ಚಿದ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ಗೋಪಾಲ ನಾಯ್ಕ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ನಡುವೆ, ಅಡ್ಡನಪಾರೆ ಪ್ರದೇಶದ ಶೌಚಾಲಯವೊಂದರಲ್ಲಿ ದುರ್ಗಂಧ ಹರಡುತ್ತಿರುವ ಬಗ್ಗೆ ಸ್ಥಳೀಯರು ಗಮನಿಸಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮಹಾಬಲ ಅವರ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *